ಡೇರಾ ಸಚ್ಚಾ ಸೌಧದ ಗುರ್ಮಿತ್ ರಾಮ್ ಸಿಂಗ್ ರಹೀಮ್ ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋದ ಮೇಲೆ ಮಠದಲ್ಲಿ ನಡೆಯುವ ಅಂತಹ ಪ್ರಕರಣಗಳ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಗುರ್ಮೀತ್ ಅಷ್ಟೇ ಅಲ್ಲದೇ ನಿತ್ಯಾನಂದ ಸೇರಿದಂತೆ ದೇಶದ ಹತ್ತಾರು ಮುಖಂಡರು ಇಂತಹ ಪ್ರಕರಣದಲ್ಲಿ ಸಿಲುಕಿದ್ದಾರೆ.
ಸುಳ್ ಸುದ್ದಿ ವಾರ್ತೆ, ನವದೆಹಲಿ: ಡೇರಾ ಸಚ್ಚಾ ಸೌಧದ ಗುರ್ಮಿತ್ ರಾಮ್ ಸಿಂಗ್ ರಹೀಮ್ ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋದ ಮೇಲೆ ಮಠದಲ್ಲಿ ನಡೆಯುವ ಅಂತಹ ಪ್ರಕರಣಗಳ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಗುರ್ಮೀತ್ ಅಷ್ಟೇ ಅಲ್ಲದೇ ನಿತ್ಯಾನಂದ ಸೇರಿದಂತೆ ದೇಶದ ಹತ್ತಾರು ಮುಖಂಡರು ಇಂತಹ ಪ್ರಕರಣದಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಮಠಗಳಳಲ್ಲೂ ಭಕ್ತೆಯರಿಗಾಗಿ ಪ್ರತ್ಯೇಕ ವಿಭಾಗ ತೆರೆದು, ಅವರಿಗಾಗಿ ಪ್ರತ್ಯೇಕ ಸ್ವಾಮಿಣಿಯನ್ನು ನೇಮಕಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಶೀಘ್ರದಲ್ಲೇ ಕಾಯ್ದೆ ರೂಪಿಸುವುದಕ್ಕೂ ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಪುರುಷ ಸನ್ಯಾಸಿಗಳಿಗೂ ಮಹಿಳಾ ಭಕ್ತೆಯರಿಗೂ ಯಾವುದೇ ರೀತಿಯ ಭೇಟಿಯಿಲ್ಲದಂತೆ ಮಠಗಳಲ್ಲಿ ವ್ಯವಸ್ಥೆ ಮಾಡಬೇಕು, ಮಹಿಳೆಯರಿಗೆ ಮಹಿಳಾ ಸನ್ಯಾಸಿಗಳೇ ಇರಬೇಕು ಎಂಬುವುದು ಸರ್ಕಾರದ ಆಶಯ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.
![[ಸುಳ್ ಸುದ್ದಿ] ದೇಶದ ಎಲ್ಲಾ ಮಠದಲ್ಲೂ ಭಕ್ತೆಯರಿಗಾಗಿ ಪ್ರತ್ಯೇಕ ಸ್ತ್ರೀ ಸ್ವಾಮಿಣಿ ನೇಮಕಕ್ಕೆ ಆದೇಶ? [ಸುಳ್ ಸುದ್ದಿ] ದೇಶದ ಎಲ್ಲಾ ಮಠದಲ್ಲೂ ಭಕ್ತೆಯರಿಗಾಗಿ ಪ್ರತ್ಯೇಕ ಸ್ತ್ರೀ ಸ್ವಾಮಿಣಿ ನೇಮಕಕ್ಕೆ ಆದೇಶ?](https://static.asianetnews.com/images/w-1280,h-720,imgid-9fc7e00b-3e0a-4a78-ba7a-f58593f91600,imgname-image.jpg)