Asianet Suvarna News Asianet Suvarna News

ವಾಜಪೇಯಿ ಇನ್ನಿಲ್ಲ ಎಂಬ ಸುಳ್ಳುಸುದ್ದಿ: ವಾಟ್ಸಪ್‌ನಲ್ಲಿ ಭರಾಟೆ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿಧನರಾಗಿದ್ದಾರೆ ಎಂಬ ಸುಳ್ಳು ಮಾಹಿತಿ ವಾಟ್ಸಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರನ್ನು ಗೊಂದಲಕ್ಕೀಡು ಮಾಡಿವೆ.

Fake news of former PM Atal Bihari Vajpayees Death circulated on Social media

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿಧನರಾಗಿದ್ದಾರೆ ಎಂಬ ಸುಳ್ಳು ಮಾಹಿತಿ ವಾಟ್ಸಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರನ್ನು ಗೊಂದಲಕ್ಕೀಡು ಮಾಡಿವೆ.

93 ವರ್ಷದ ಹಿರಿಯ ನಾಯಕ ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಸ್ಥಿತಿಗತಿಯ ಭಾವಚಿತ್ರಗಳು ಕೂಡ ಎಲ್ಲೂ ಲಭ್ಯವಿಲ್ಲ. ಪ್ರಧಾನಿಯಂಥ ಗಣ್ಯರು ಅವರ ಜನ್ಮದಿನಕ್ಕೆ ಶುಭ ಕೋರಲು ತೆರಳುತ್ತಾರಾದರೂ ಆಗ ಭಾವಚಿತ್ರವೇನೂ ಬಿಡುಗಡೆ ಆಗುವುದಿಲ್ಲ.

2015ರಲ್ಲೂ ವಾಜಪೇಯಿ ಇನ್ನಿಲ್ಲ ಎಂದು ಸುದ್ದಿಗಳು ಹಬ್ಬಿದ್ದವು. ದೇಶದ ಅನೇಕ ಕಡೆ ಈ ಸುಳ್ಳು ಸುದ್ದಿ ನಂಬಿ ಅನೇಕರು ಶ್ರದ್ಧಾಂಜಲಿಯನ್ನೂ ಸಲ್ಲಿಸಿದ್ದರು. ಶ್ರದ್ಧಾಂಜಲಿ ಸಲ್ಲಿಸಿದ್ದಕ್ಕೆ ಕಮಕಲಾಂತ ದಾಸ್‌ ಎಂಬ ಮುಖ್ಯ ಶಿಕ್ಷಕನನ್ನು ಒಡಿಶಾದಲ್ಲಿ ಅಮಾನತು ಮಾಡಲಾಗಿತ್ತು.

Follow Us:
Download App:
  • android
  • ios