ಬೆಂಗಳೂರು (ಜೂ. 20): ತಾನು ದೊಡ್ಡ ಕಾರಿನಲ್ಲಿ ಓಡಾಡಬೇಕು. ಹೀಗಾಗಿ ಫಾರ್ಚುನರ್ ಕಾರು ಕೊಡಿ ಎಂದು ಬೇಡಿಕೆ ಇಟ್ಟಿರುವ ಸಚಿವ ಜಮೀರ್ ಅಹ್ಮದ್‌ಗೆ ಅದೃಷ್ಟ ಖುಲಾಯಿಸಿದೆ. ಫಾರ್ಚುನರ್ ಕಾರಿನ ಬದಲು ತಾವು ಅಧ್ಯಕ್ಷರಾಗಿದ್ದಾಗ ಬಳಸುತ್ತಿದ್ದ ಕಾರನ್ನೇ ನೀಡುವುದಾಗಿ ಜಮೀರ್ ಅಹ್ಮದ್’ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಶ್ವಾಸನೆ ನೀಡಿದ್ದಾರೆ.

ಈ ಕಾರು ದೊಡ್ಡದಾದ ಕಾರಣ ನಾನು ಬಳಕೆ ಮಾಡುತ್ತಿಲ್ಲ. ಹೇಗೋ ಈ ಕಾರು ಬಳಕೆಯಾಗದೇ ಖಾಲಿ ಇದೆ. ನೀವು ಬಂದು ತೆಗೆದುಕೊಂಡು ಹೋಗುವುದಾದರೆ ಕೊಡುತ್ತೇನೆ ಎಂದು ಜಮೀರ್‌ಗೆ ಒಬಾಮಾ ಫೋನ್ ಮಾಡಿದ್ದಾರೆ. ಇದರಿಂದ ಫುಲ್ ಖುಷ್ ಆಗಿರುವ ಜಮೀರ್ ಕಾರು ತರಲು ಅಮೆರಿಕಕ್ಕೆ ತೆರಳಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.