ನವದೆಹಲಿ :  ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿದ್ದು, ಜನರ ಕೈಗೆಟುಕದಂತಾಗಿದೆ. ಹೀಗಾಗಿ ಸರ್ಕಾರ ಲಾಟರಿ ಸ್ಕೀಮ್‌ವೊಂದನ್ನು ಜಾರಿ ಮಾಡಿದೆ. ಈ ಲಾಟರಿಯಲ್ಲಿ ವಿಜೇತರಿಗೆ ಹಣದ ಬದಲು 10 ಲೀಟರ್ ಪೆಟ್ರೋಲ್ ನೀಡಲಾಗುತ್ತದೆ. ಈ ಸ್ಕೀಮ್‌ನಲ್ಲಿ ಪ್ರತ್ಯೇಕವಾಗಿ ಲಾಟರಿ ಖರೀದಿಸಬೇಕಾಗಿಲ್ಲ. 

ಪೆಟ್ರೋಲ್ ಹಾಕಿಸಿಕೊಂಡಿದ್ದಕ್ಕೆ  ರಸೀದಿ ಇದ್ದರೆ ಸಾಕು. ಅದಕ್ಕೊಂದು ನಂಬರ್ ನೀಡಲಾಗುತ್ತದೆ. ಪ್ರತಿ ದಿನ ರಾತ್ರಿ 12 ಗಂಟೆಗೆ 10 ಮಂದಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮರುದಿನ ಅದೃಷ್ಟಶಾಲಿಗಳು ಸಮೀಪದ ಪೆಟ್ರೋಲ್ ಬಂಕ್‌ಗೆ ಹೋಗಿ ನಂಬರ್ ತೋರಿಸಿ ಉಚಿತವಾಗಿ ಪೆಟ್ರೋಲ್ ಹಾಕಿಸಿಕೊಳ್ಳಬಹುದು. 

ಈ ಸ್ಕೀಮ್ ಪ್ರಕಟವಾಗುತ್ತಿದ್ದಂತೆ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.