Asianet Suvarna News Asianet Suvarna News

ವೈರಲ್ ಚೆಕ್: ಪುಲ್ವಾಮಾ ದಾಳಿ ಬಿಜೆಪಿಯ ಪಿತೂರಿ ಎಂದರೇ ಅಭಿನಂದನ್?

ಪುಲ್ವಾಮಾ ದಾಳಿ ಬಳಿಕ ಭಾರತದ ಗಡಿಯೊಳಗೆ ಬಂದಿದ್ದ ಎಫ್-16 ಯುದ್ಧ ವಿಮಾನವನ್ನು ಬೆನ್ನಟ್ಟಿ ಪಾಕ್‌ಗೆ ಸೆರೆ ಸಿಕ್ಕಿ ಮತ್ತೆ ಭಾರತಕ್ಕೆ ವಾಪಸ್ಸಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್
ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ಧಿ? ಏನಿದರ ಸತ್ಯಾಸತ್ಯತೆ? 

Fake news claiming BJP behind Pulwama attack attributed to IAF Pilot Abhinandan
Author
Bengaluru, First Published May 14, 2019, 10:44 AM IST

ಪುಲ್ವಾಮಾ ದಾಳಿ ಬಳಿಕ ಭಾರತದ ಗಡಿಯೊಳಗೆ ಬಂದಿದ್ದ ಎಫ್-೧೬ ಯುದ್ಧ ವಿಮಾನವನ್ನು ಬೆನ್ನಟ್ಟಿ ಪಾಕ್‌ಗೆ ಸೆರೆ ಸಿಕ್ಕಿ ಮತ್ತೆ ಭಾರತಕ್ಕೆ ವಾಪಸ್ಸಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅದರಲ್ಲಿ ಪುಲ್ವಾಮಾ ದಾಳಿ ಬಿಜೆಪಿಯ ಪಿತೂರಿ ಎಂದು ಹೇಳಲಾಗಿದೆ. ವೈರಲ್ ಆಗಿರುವ ಹೇಳಿಕೆಯಲ್ಲಿ, ‘ಪುಲ್ವಾಮಾ ದಾಳಿಯು ಬಿಜೆಪಿಯ ಪಿತೂರಿ. ಚುನಾವಣೆಯಲ್ಲಿ ಗೆಲ್ಲಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೆರವು ನೀಡಿದ್ದಾರೆ. ಅದಕ್ಕಾಗಿಯೇ ಪಾಕ್ ಮೇಲೆ ಬಿಜೆಪಿ ನಕಲಿ ದಾಳಿ ನಡೆಸಿತು. ಇಮ್ರಾನ್ ಒಪ್ಪಿಗೆಯ ಮೇರೆಗೇ ಬಾಲಾಕೋಟ್ ದಾಳಿ ನಡೆದಿದೆ’ ಎಂದಿದೆ.

‘ಇಂಡಿಯಾ ಪೇಜ್ 24 ಹಿಂದಿ’ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಇದನ್ನು ಪೋಸ್ಟ್ ಮಾಡಿದ್ದು, ಸದ್ಯ ಅದೀಗ 8000 ಬಾರಿ ಶೇರ್ ಆಗಿದೆ. ಆದರೆ ನಿಜಕ್ಕೂ ವಿಂಗ್ ಕಮಾಂಡರ್ ಅಭಿನಂದನ್ ಈ ಹೇಳಿಕೆ ನೀಡಿದ್ದರೇ ಎಂದು ಅವರ ಇತ್ತೀಚಿನ ಹೇಳಿಕೆಗಳನ್ನು ‘ಬೂಮ್’ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದಿದೆ.

ಅಲ್ಲದೆ ಈಗ್ಕಿಅಲ್ತಾಫ್ ಖಾನ್ ಎಂಬುವವರು ಇದೇ ಗ್ರಾಫಿಕ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ‘ಸ್ನೇಹಿತರೇ, ಈ ಹೇಳಿಕೆಯನ್ನಿಟ್ಟುಕೊಂಡು ನನ್ನನ್ನು ನಿಂದಿಸಬೇಡಿ. ಈ ಪೋಸ್ಟ್ ಮೂಲಕ ಸತ್ಯ ಹೇಳುತ್ತಿದ್ದೇನೆ. ಬಿಜೆಪಿಗರ ಕಣ್ಣಿಗೆ ಇದು ಸುಳ್ಳಾಗಿರಬಹುದು, ಆದರೆ ಇದೇ ಸತ್ಯ..!’ ಎಂದು ಒಕ್ಕಣೆ ಬರೆದಿದ್ದಾರೆ. ಈ ಹಿಂದೆಯೂ ಅಭಿನಂದನ್ ಹೆಸರಿನಲ್ಲಿ ಅನೇಕ ಸುಳ್ಳುಸುದ್ದಿಗಳು ಹರಿದಾಡಿದ್ದು, ಸದ್ಯ ಈ ಹೇಳಿಕೆಯೂ ಅದೇ ಸಾಲಿಗೆ ಸೇರುತ್ತದೆ ಎಂಬುದು ಸ್ಪಷ್ಟ. 

- ವೈರಲ್ ಚೆಕ್ 


 

Follow Us:
Download App:
  • android
  • ios