ಟ್ವೀಟರ್‌ನಲ್ಲಿ ಭಾರೀ ಸುದ್ದಿಯಾಗಿದ್ದ ಮೀ ಟೂ ಅಭಿಯಾನ ಇಂದು ಕೊನೆಯಾಗಲಿದೆ. ಅಂದರೆ, ನಾಳೆಯಿಂದ ಟ್ವೀಟರ್‌ನಲ್ಲಿ ಮೀ ಟೂ ಎಂದು ಆರೋಪ ಮಾಡಿದರೆ ಹ್ಯಾಷ್‌ ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲ. 

ಬೆಂಗಳೂರು : ಟ್ವೀಟರ್‌ನಲ್ಲಿ ಭಾರೀ ಸುದ್ದಿಯಾಗಿದ್ದ ಮೀ ಟೂ ಅಭಿಯಾನ ಇಂದು ಕೊನೆಯಾಗಲಿದೆ. ಅಂದರೆ, ನಾಳೆಯಿಂದ ಟ್ವೀಟರ್‌ನಲ್ಲಿ ಮೀ ಟೂ ಎಂದು ಆರೋಪ ಮಾಡಿದರೆ ಹ್ಯಾಷ್‌ ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲ. 

ಒಮ್ಮೆ ಟ್ರೆಂಡ್ ಸೃಷ್ಟಿಯಾದ ಬಳಿಕ ಒಂದು ತಿಂಗಳು ಮಾತ್ರ ಅವಕಾಶ ಎಂಬ ಹೊಸ ನಿಯಮವನ್ನು ಟ್ವೀಟರ್ ಸಂಸ್ಥೆ ಜಾರಿಗೊಳಿಸಿದೆ. 

ಮೀ ಟೂ ಟ್ರೆಂಡ್ ಶುರುವಾಗಿ ಒಂದು ತಿಂಗಳು ಕಳೆದಿರುವುದರಿಂದ ಈ ಅಭಿಯಾನ ಇಂದಿಗೇ ಕೊನೆಯಾಗಲಿದೆ. ಯಾರಾದರೂ ಹೊಸದಾಗಿ ಆರೋಪ ಮಾಡುವುದಿದ್ದರೆ ಮುಂದಿನ ವರ್ಷದವರೆಗೂ ಕಾಯ ಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಇನ್ನು ಫೇಸ್‌ಬುಕ್ ಕೂಡ ಮೀ ಟೂ ಕುರಿತ ಪೋಸ್ಟ್‌ಗಳನ್ನು ಯಾರಿಗೂ ಕಾಣದಂತೆ ಮರೆಮಾಚಲು ಮುಂದಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.