ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸಿದ್ಧತೆ ಆರಂಭವಾಗಿದ್ದು ಇದೇ ವೆಳೆ ಕೆಲ ಬಿಜೆಪಿಗರು ಸಚಿವ ಸ್ಥಾನಕ್ಕೆ ಆಕಾಂಕ್ಷಿ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಸರ್ಕಾರ ಬಹುಮತ ಕೊರತೆಯಿಂದ ಬಿದ್ದುಹೋಗಲಿದೆ ಎಂದು ಸುದ್ದಿಯಾಗಿತ್ತು. ಆದರೆ, ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನದ ಆಕಾಂಕ್ಷಿಗಳನ್ನು ಲೆಕ್ಕಹಾಕಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿರುವ ಶಾಸಕರ ಸಂಖ್ಯೆಗಿಂತಲೂ ಹೆಚ್ಚು ಇರುವುದು ಕಂಡುಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಿಂದ ಗೊಂದಲಕ್ಕೆ ಒಳಗಾಗಿ ಹೈಕಮಾಂಡ್ ಶಾಸಕರ ತಲೆ ಎಣಿಕೆ ಮಾಡಿದಾಗ ಸರ್ಕಾರದಲ್ಲಿರುವ ಶಾಸಕರು ಮೊದಲಿನಷ್ಟೇ ಇರುವುದು ಕಂಡುಬಂದಿದೆ. 

ಹೊಸ ಸರ್ಕಾರ ರಚನೆಯ ಕನಸು ಕಾಣುತ್ತಿದ್ದ ಕೆಲವು ಬಿಜೆಪಿ ಶಾಸಕರೂ ಗುಟ್ಟಾಗಿ ಸಂಪುಟ ಸ್ಥಾನ ನೀಡುವಂತೆ ಕೋರಿ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.