Asianet Suvarna News Asianet Suvarna News

ನಕಲಿ ಬೆರಳು ಬಳಸಿ ಚುನಾವಣೆಗಳಲ್ಲಿ ಮತ ಹಾಕಬಹುದಾ?

ಚುನಾವಣೆಗಳಲ್ಲಿ ಮತ ಹಾಕಲು ನಕಲಿ ಬೆರಳು | ಪ್ಲಾಸ್ಟಿಕ್ ರಬ್ಬರ್‌ನಿಂದ ಮಾಡಲಾದ ಬೆರಳುಗಳಿವು |  ಈ ಸುದ್ದಿ ನಿಜನಾ? 

Fake finger use to vote in election
Author
Bengaluru, First Published Sep 26, 2018, 9:00 AM IST
  • Facebook
  • Twitter
  • Whatsapp

ಬೆಂಗಳೂರು (ಸೆ. 26): ನಕಲಿ ಬೆರಳುಗಳನ್ನು ಚುನಾವಣೆಗಳಲ್ಲಿ ಬಳಸಿ ಮೋಸ ಮಾಡಲಾಗುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಂದೇಶದೊಂದಿಗೆ ಪ್ಲಾಸಿಕ್ ರಬ್ಬರ್‌ನಿಂದ ಮಾಡಲಾದ ನಕಲಿ ಬೆರಳುಗಳ ಫೋಟೋವಿದೆ. ಈ ಸಂದೇಶ ಹಲವು ಬಾರಿ ಸೋಷಿಯಲ್ ಮೀಡಿಯಾಗಲಲ್ಲಿ ಹರಿದಾಡಿವೆ. ಆದರೆ ಯಾವ ಚುನಾವಣೆಗಳಲ್ಲಿ ಈ ನಕಲಿ ಬೆರಳುಗಳನ್ನು ಬಳಸಿ ಅಕ್ರಮ ಎಸಗಲಾಗಿದೆ ಎಂದು ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ. ಆದರೆ ನಿಜಕ್ಕೂ ನಕಲಿ ಬೆರಳುಗಳನ್ನು  ಚುನಾವಣಾ ಅಕ್ರಮಕ್ಕಾಗಿ ಬಳಸಲಾಗುತ್ತಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿದೆ.

ಈ ಸುದ್ದಿಯ ವಾಸ್ತವ ಪತ್ತೆಹಚ್ಚಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ ನೈಜತೆ ಬಯಲಾಗಿದೆ. ವಾಸ್ತವವಾಗಿ ಜಪಾನ್‌ನ ಯಕುಝಾ ಸಮುದಾಯದಲ್ಲಿ ಎಡಗೈಯ ಕಿರುಬೆರಳು ಆ ಸಮುದಾಯವನ್ನು ಸಂಕೇತಿಸುತ್ತದೆ. ಯಕುಝಾ ಸಂಪ್ರದಾಯದ ಪ್ರಕಾರ ಆ ಸಮುದಾಯದ ಸದಸ್ಯನೊಬ್ಬ ಮೊದಲ ಬಾರಿಗೆ ಅಕ್ರಮ ಎಸಗಿದಲ್ಲಿ ಎಡಗೈಯ ಕಿರುಬೆರಳನ್ನು ಕತ್ತರಿಸಬೇಕು. ಎರಡನೇ ಬಾರಿಯೂ ಅಂಥದ್ದೇ ಅಕ್ರಮ ಎಸಗಿದಲ್ಲಿ ಮತ್ತೆ ಬೆರಳನ್ನು ಕತ್ತರಿಸಬೇಕಾಗುತ್ತದೆ.

ಆ ಕಳಂಕದಿಂದಾಗಿ ಅವರು ಕೆಲಸ ಹುಡುಕುವುದು ಕಷ್ಟವಾಗುತ್ತದೆ. ಆಗ ಅವರು ಈ ಪ್ರಾಸ್ಥೆಟಿಕ್ ಬೆರಳನ್ನು ಬಳಸುತ್ತಾರೆ. ಅದೇ ಫೋಟೋವನ್ನೇ ಬಳಸಿಕೊಂಡು ಭಾರತದಲ್ಲಿ ಚುನಾವಣಾ ಅಕ್ರಮ ಮಾಡಲಾಗುತ್ತಿದೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿದೆ. ಆದರೆ ಭಾರತದಲ್ಲಿ ನಕಲಿ ಬೆರಳುಗಳನ್ನು ಬಳಸಿ ಓಟ್ ಹಾಕಿದ ಯಾವುದೇ ಅಧಿಕೃತ ವರದಿ ಇಲ್ಲ. ಅಲ್ಲದೆ ಭಾರತದ ಮತದಾನ ಮಾಡಲು ಕಡ್ಡಾಯ ಗುರುತು ಚೀಟಿ ಅಗತ್ಯವಿದೆ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

-ವೈರಲ್ ಚೆಕ್ 

Follow Us:
Download App:
  • android
  • ios