ಒಂದೇ ಸಿರಿಂಜ್ ಚುಚ್ಚಿ 46 ಮಂದಿಗೆ ಏಡ್ಸ್ ಹರಡಿದ ವೈದ್ಯ

First Published 8, Feb 2018, 9:11 AM IST
Fake doctor accused of infecting 46 Indians with HIV arrested
Highlights

ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಕೇವಲ 10 ರುಪಾಯಿಯಲ್ಲಿ ಔಷಧಿ ನೀಡುವುದಾಗಿ ಹೇಳಿ, ಒಂದೇ ಸಿರಿಂಜ್‌ನಲ್ಲಿ ಎಲ್ಲರಿಗೂ ಚುಚ್ಚುಮದ್ದು ನೀಡಿ 46 ಮಂದಿಗೆ ಏಡ್ಸ್ ಹರಡುವುದಕ್ಕೆ ಕಾರಣನಾದ ನಕಲಿ ವೈದ್ಯನನ್ನು ಬಂಧಿಸಲಾಗಿದೆ.

ಉನ್ನಾವ್: ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಕೇವಲ 10 ರುಪಾಯಿಯಲ್ಲಿ ಔಷಧಿ ನೀಡುವುದಾಗಿ ಹೇಳಿ, ಒಂದೇ ಸಿರಿಂಜ್‌ನಲ್ಲಿ ಎಲ್ಲರಿಗೂ ಚುಚ್ಚುಮದ್ದು ನೀಡಿ 46 ಮಂದಿಗೆ ಏಡ್ಸ್ ಹರಡುವುದಕ್ಕೆ ಕಾರಣನಾದ ನಕಲಿ ವೈದ್ಯನನ್ನು ಬಂಧಿಸಲಾಗಿದೆ.

ನಕಲಿ ವೈದ್ಯ ರಾಜೇಂದ್ರ ಕುಮಾರ್ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿತ್ತು. ಆ ಪ್ರಕಾರ, ಬುಧವಾರ ಆತ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ ಎಂದು ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. ಇನ್ನೊಂದೆಡೆ, ಕೇಂದ್ರ ಮತ್ತು ರಾಜ್ಯದ ಏಡ್ಸ್ ನಿಯಂತ್ರಣ ಸಂಸ್ಥೆಗಳ ಅಧಿಕಾರಿಗಳು ಅಮಾನವೀಯ ಘಟನೆ ನಡೆದ ಇಲ್ಲಿನ ಬಂಗಾರ್‌ಮಾವು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

loader