ಚಿಕ್ಕಮಗಳೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ 2000 ರೂ ಮುಖಬೆಲೆಯ ಖೋಟಾ ನೋಟುಗಳು ಚಲಾವಣೆಯಲ್ಲಿದೆ ಎನ್ನಲಾಗಿದ್ದು, ಮಾರುಕಟ್ಟೆಗೆ ಬಂದತಹ ಕೆಲ ಅಪರಿಚಿತರು ಮೊನ್ನೆ ಆರ್ ಬಿ ಐ ಪರಿಚಿಯಿಸಿದ ನೂತನ ಎರಡೂ ಸಾವಿರ ಮುಖ ಬೆಲೆಯ ನೋಟನ್ನು ನೀಡಿ ಚೇಂಜ್ ಪಡೆದಿದ್ದು, ಅವರು ನೀಡಿದಂತಹ ನೋಟುಗಳು ನಕಲಿಯಾಗಿವೆ ಎನ್ನಲಾಗಿದೆ. 

ಚಿಕ್ಕಮಗಳೂರು(ನ.12): ದೇಶಕ್ಕೆ ದೇಶವೇ ಬೆಚ್ಚಿ ಬೀಳುವಂತೆ 500 ಮತ್ತು ಸಾವಿರ ಮುಖ ಬೆಲೆಯ ನೋಟುಗಳನ್ನು ನಿಷೇಧ ಹೊರಡಿಸಿದ್ದ ಪ್ರಧಾನಿ ಮೋದಿ ನಕಲಿ ಮಾಡಲಾಗದ 2000 ರೂ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದರು, ಆದರೆ ಹೊಸ ನೋಟುಗಳು ಜನಸಾಮಾನ್ಯರ ಕೈ ಸೇರುವ ಮುನ್ನವೇ ನಕಲಿ ನೋಟುಗಳ ಹರಿದಾಟ ಶುರುವಾಗಿದೆ.

ಚಿಕ್ಕಮಗಳೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ 2000 ರೂ ಮುಖಬೆಲೆಯ ಖೋಟಾ ನೋಟುಗಳು ಚಲಾವಣೆಯಲ್ಲಿದೆ ಎನ್ನಲಾಗಿದ್ದು, ಮಾರುಕಟ್ಟೆಗೆ ಬಂದತಹ ಕೆಲ ಅಪರಿಚಿತರು ಮೊನ್ನೆ ಆರ್ ಬಿ ಐ ಪರಿಚಿಯಿಸಿದ ನೂತನ ಎರಡೂ ಸಾವಿರ ಮುಖ ಬೆಲೆಯ ನೋಟನ್ನು ನೀಡಿ ಚೇಂಜ್ ಪಡೆದಿದ್ದು, ಅವರು ನೀಡಿದಂತಹ ನೋಟುಗಳು ನಕಲಿಯಾಗಿವೆ ಎನ್ನಲಾಗಿದೆ. 

ಕಲರ್ ಜೆರಾಕ್ಸ್ ಮಾಡಿ ಅಸಲಿ ನೋಟಿಗೆ ತಲೆಯ ಮೇಲೆ ಹೊಡೆದಂತಿದೆ ಈ ನಕಲಿ ನೋಟು. ಪ್ರಧಾನಿ ಮೋದಿ ಕಪ್ಪುಹಣ ತಡೆಗೆ ಈ ರೀತಿಯ ಹೊಸ ನೋಟುಗಳನ್ನು ಹೊರ ತಂದ ನಾಲ್ಕು ದಿನದಲ್ಲೇ ಖೋಟಾ ನೋಟು ಹೊರ ಬಂದಿರುವುದು ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಈ ಕುರಿತು ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.