Asianet Suvarna News Asianet Suvarna News

ರಾಹುಲ್‌ಗೆ ಪಾಠ ಹೇಳಿ ಲಿಂಬು ಪಾನಕ ಕುಡಿಸಿದ ಸಾಮಾಜಿಕ ತಾಣ!

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೋಕಾ ಕೋಲಾ ಮತ್ತು ಮೆಕ್ ಡೋನಾಲ್ಡ್ಸ್ ಹೇಳಿಕೆ ಇಂದು ಸಹ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆಗುತ್ತಲೇ ಇದೆ. ಅನೇಕರು ಕೋಕಾ ಕೋಲಾ ಕಂಪನಿಯ ಮೂಲವನ್ನು ರಾಹುಲ್ ಗಾಂಧಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ರಾಹುಲ್ ಕಲಿಯಲೇಬೇಕಾದ ಇತಿಹಾಸದ ಪಾಠಗಳು ಇಲ್ಲಿವೆ.

Fact check: Social Media Teaches History to Rahul Gandhi

ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೋಕಾ ಕೋಲಾ ಮತ್ತು ಮೆಕ್ ಡೋನಾಲ್ಡ್ಸ್ ಹೇಳಿಕೆ ಇಂದು ಸಹ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆಗುತ್ತಲೇ ಇದೆ. ಅನೇಕರು ಕೋಕಾ ಕೋಲಾ ಕಂಪನಿಯ ಮೂಲವನ್ನು ರಾಹುಲ್ ಗಾಂಧಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಹಾಗಾದರೆ ನಿಜಕ್ಕೂ ಕೋಕಾ ಕೋಲಾ ಮತ್ತು ಮೆಕ್ ಡೋನಾಡ್ಸ್ ಹುಟ್ಟಿದ್ದು ಎಲ್ಲಿ? ಇದಕ್ಕೆ ಉತ್ತರ ಇಲ್ಲಿದೆ. ಜತೆಗೆ ರಾಹುಲ್ ಕಲಿಯಲೇಬೇಕಾದ ಇತಿಹಾಸದ ಪಾಠಗಳು ಇಲ್ಲಿವೆ.

ಕೋಕಾ ಕೋಲಾ ಮೂಲ ಹೇಳಿದ ರಾಹುಲ್‌ಗೆ ಟ್ರೋಲ್ ಹಾರ

ಪಾಠ 1: ಕೋಕಾ ಕೋಲಾ:
ಕೋಕಾ ಕೋಲಾ ಕಂಪನಿಯ ಸಂಸ್ಥಾಪಕನ ಹೆಸರು ಜಾನ್ ಪೆಂಬರ್ ಟನ್. ಪೆಂಬರ್ ಟನ್ ಒಬ್ಬ ನೋವು ನಿವಾರಕ ಮಾತ್ರೆಯ ದಾಸನಾಗಿದ್ದ. ಕೋಕಾ ತೋಟಗಳಿಂದ ಸಂಗ್ರಹಿಸಿದ ಸಿಹಿಯನ್ನು ನೀರು ಮತ್ತಿತರ ವಸ್ತುಗಳೊಂದಿಗೆ ಕೋಲಾ ಬೀಜಗಳೊಂದಿಗೆ ಬೆರೆಸಲು ಆರೆಂಭಿಸಿದ್ದೇ ಮುಂದೆ ಕೋಕಾ ಕೋಲಾವಾಯಿತು. ಶ್ರೀಮಂತರ ಪಟ್ಟಿಯಲ್ಲಿ ಯಾವಾಗಲೂ ಪೆಂಬರ್ ಟನ್ ಹೆಸರು ಕೇಳಿ ಬರಲೇ ಇಲ್ಲ!

ಪಾಠ 2: ಮೆಕ್ ಡೋನಾಲ್ಡ್ಸ್: ರಿಚರ್ಡ್ ಡೋನಾಲ್ಡ್ಸ್ ಮತ್ತು ಮಾರೀಸ್ ಡೋನಾಲ್ಡ್ಸ್ ಮೆಕ್ ಡೋನಾಲ್ಡ್ಸ್ ದ ಮೂಲ ಎಂದು ದಾಖಲೆಗಳು ಹೇಳುತ್ತವೆ. ಇವರು ನಿಜಕ್ಕೂ ಮೆಕ್ ಡೋನಾಲ್ಡ್ಸ್ ಸಂಸ್ಥಾಪಕರಲ್ಲ. ಆದರೆ ಇವರು ಆರಂಭಿಸಿದ ಫಾಸ್ಟ್ ಫುಡ್ ಶಾಖೆಯನ್ನು ಉದ್ಯಮಿ ಅಂದು ಮಿಲ್ಕ್‌ ಶೇಕ್ ತಯಾರಕರಾಗಿದ್ದ ರಾಯ್ ಕ್ರೋಕ್ ಗೆ ಮಾರಾಟ ಮಾಡುತ್ತಾರೆ!

ಪಾಠ 3: ಪೋರ್ಡ್ ಮೋಟಾರ್ಸ್: 1903 ರಲ್ಲಿ ಹೆನ್ರಿ ಪೋರ್ಡ್ ಮತ್ತು 11 ಜನ ಸೇರಿ ಆರಂಭಿಸುವ ಕಂಪನಿ ಮುಂದೆ ದೊಡ್ಡದಾಗಿ ಬೆಳೆಯುತ್ತದೆ. ಒಬ್ಬ ಮೆಕಾನಿಕ್ ಪೋರ್ಡ್ ಕಂಪನಿ ಹುಟ್ಟುಹಾಕಿದ ಎಂದು ರಾಹುಲ್ ಭಾಷಣದಲ್ಲಿ ಹೇಳಿ ಟೀಕೆಗೆ ಗುರಿಯಾಗಿದ್ದರು.

Follow Us:
Download App:
  • android
  • ios