ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಟ್ವಿಟರ್ ನಲ್ಲಿ ಜಾಲತಾಣಿಗರು ರಾಹುಲ್ ಗಾಂಧಿಯನ್ನು ಸರಿಯಾಗಿಯೇ ಕಾಲೆಳೆದಿದ್ದಾರೆ. ನೀವು ಒಂದಿಷ್ಟು ಟ್ರೋಲ್ ನೋಡಿ ಎಂಜಾಯ್ ಮಾಡಿ.,...
ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಟ್ವಿಟರ್ ನಲ್ಲಿ ಜಾಲತಾಣಿಗರು ರಾಹುಲ್ ಗಾಂಧಿಯನ್ನು ಸರಿಯಾಗಿಯೇ ಕಾಲೆಳೆದಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕರ್ತರು ಮತ್ತು ಒಬಿಸಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಹೆಚ್ಚು ಪರಿಶ್ರಮವಹಿಸಿ ಕೆಲಸ ಮಾಡುವ ಭಾರತೀಯರು ಮುಖ್ಯ ವೇದಿಕೆಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸರಕಾರವನ್ನು ಗುರಿ ಮಾಡಿಸಿಕೊಂಡು ವಾಗ್ದಾಳಿ ಮಾಡುವ ಭರದಲ್ಲಿ ಹೇಳಿದ ಮಾತು ಟ್ರೋಲಿಗರಿಗೆ ಆಹಾರವಾಗಿದೆ.
ಲಿಂಬು ಪಾನಿ ಮಾರುವವವರು ಪರಿಶ್ರಮದಿಂದ ಕೋಕಾ ಕೋಲಾ ಕಂಪನಿ ಮಾಲೀಕರಾದರು. ರಸ್ತೆ ಬದಿ ಡಾಬಾ ನಡೆಸುತ್ತಿದ್ದವನು ಪರಿಶ್ರಮದಿಂದ ಮೆಕ್ ಡೋನಾಲ್ಡ್ ದಂತಹ ಕಂಪನಿ ತೆರೆದರು ಎಂದು ರಾಹುಲ್ ಹೇಳಿದ ನಂತರ ಟ್ವಿಟರ್ ನ ಚಿತ್ರಣವೇ ಬದಲಾಯಿತು. ನೀವು ಒಂದಿಷ್ಟು ಟ್ರೋಲ್ ನೋಡಿ ಎಂಜಾಯ್ ಮಾಡಿ.,...
