ಮೈತುಂಬಾ ಆಭರಣ ಧರಿಸಿರುವ ಹುಡುಗ ತಮಿಳುನಾಡಿನ ದ್ರಾಮಿಡ ಮುನ್ನೇತರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ.ಕೆ ಸ್ಟಾಲಿನ್‌ ಮೊಮ್ಮಗ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತುಷಾರ್‌ ನಟರಾಜನ್‌ ಎಂಬುವವರು ತರುಣನೊಬ್ಬನ ಫೋಟೋವನ್ನು ಪೋಸ್ಟ್‌ ಮಾಡಿ, ಮೈತುಂಬಾ ಚಿನ್ನಾಭರಣ ಧರಿಸಿರುವ ಈ ಹುಡುಗ ತಮಿಳುನಾಡಿನ ಡಿಎಂಕೆ ಅಧ್ಯಕ್ಷ ಸ್ಟಾಲಿನ್‌ ಮೊಮ್ಮಗ ಎಂದು ಹೇಳಿದ್ದಾರೆ. ‘ನ್ಯೂ ಇಂಡಿಯಾ’ ಫೇಸ್‌ಬುಕ್‌ ಪೇಜ್‌ ಕೂಡ ಇದೇ ಪೋಟೋವನ್ನು ಪೋಸ್ಟ್‌ ಮಾಡಿದೆ. ಇದು 400 ಬಾರಿ ಶೇರ್‌ ಆಗಿದೆ.

ಈ ಸುದ್ದಿ ನಿಜವೇ ಎಂದು ಪರಿಶೀಲಿಸಲು ಇಂಡಿಯಾ ಟುಡೇ ಆ್ಯಂಟಿ ಫೇಕ್‌ ನ್ಯೂಸ್‌ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಪಂಧಾರ್ಕರ್‌ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಇದೇ ಫೋಟೋ ಇರುವುದು ಪತ್ತೆಯಾಗಿದೆ. ಈ ಇನ್‌ಸ್ಟಾಗ್ರಾಂ ಪೇಜನ್ನು 52,000 ಜನರು ಫಾಲೋ ಮಾಡುತ್ತಿದ್ದಾರೆ.

ಇದಲ್ಲದೆ ಹಲವು ಚಿತ್ರಗಳಲ್ಲಿ ಈತ ಆಭರಣಗಳನ್ನು ಧರಿಸಿದ್ದು, ಅಕ್ಕಪಕ್ಕದ್ದಲ್ಲಿ ಭದ್ರತಾ ಸಿಬ್ಬಂದಿ ನಿಂತಿರುವ ಫೋಟೋಗಳೂ ಲಭ್ಯವಾಗಿವೆ. ಪಂದಾರ್ಕರ್‌ ಅವರ ಹಲವು ಫೋಟೋಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಈತ ಸ್ಟಾಲಿನ್‌ ಮೊಮ್ಮಗನಲ್ಲ. ಸ್ಟಾಲಿನ್‌ ಮೊಮ್ಮಗನ ಫೋಟೋಗಳು ಇಂಟರ್‌ನೆಟ್‌ನಲ್ಲಿ ಲಭ್ಯವಿಲ್ಲ.

- ವೈರಲ್ ಚೆಕ್