2000 ರು. ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಹಿಂಪಡೆಯುತ್ತಿದೆ ಎಂದು ಸುದ್ದಿಯಾದ ಬೆನ್ನಲ್ಲೇ ನಿಷೇಧಗೊಂಡಿದ್ದ 1000 ರು. ಮುಖಬೆಲೆ ನೋಟುಗಳಲ್ಲು ಆರ್‌ಬಿಐ ಮತ್ತೆ ಬಿಡುಗಡೆ ಮಾಡುತ್ತಿದೆ ಎಂದು ಸಾವಿರು ರು. ಮುಖಬೆಲೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ. ನಿಜನಾ ಈ ಸುದ್ದಿ? 

2000 ರು. ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಹಿಂಪಡೆಯುತ್ತಿದೆ ಎಂದು ಸುದ್ದಿಯಾದ ಬೆನ್ನಲ್ಲೇ ನಿಷೇಧಗೊಂಡಿದ್ದ 1000 ರು. ಮುಖಬೆಲೆ ನೋಟುಗಳಲ್ಲು ಆರ್‌ಬಿಐ ಮತ್ತೆ ಬಿಡುಗಡೆ ಮಾಡುತ್ತಿದೆ ಎಂದು ಸಾವಿರು ರು. ಮುಖಬೆಲೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

Fact Check: ಭಾರತ ಬಿಟ್ಟು ಲಂಡನ್ ಗೆ ತೆರಳುತ್ತೇನೆ ಅಂದ್ರಾ ರಾಹುಲ್ ಗಾಂಧಿ?

ಈ ನೋಟಿನ ಎಡಭಾಗದಲ್ಲಿ ಗಾಂಧಿ ಭಾವಚಿತ್ರ, ಬಭಾಗದಲ್ಲಿ ಹಸಿರು ಗೆರೆ ಇದೆ. ವಿಶೇಷ ಎಂದರೆ ಇದುವರೆಗಿನ ನೋಟುಗಳಿಗಿಂತ ಈ ನೋಟು ವಿಭಿನ್ನವಾಗಿಯೂ ಆಕರ್ಷಕವಾಗಿಯೂ ಇದೆ.

ಆದರೆ ನಿಜಕ್ಕೂ ಆರ್‌ಬಿಐ 1000 ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟವಾಗಿದೆ. ವೈರಲ್‌ ಆಗಿರುವ ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ನೋಟಿನ ಬಲಭಾಗದಲ್ಲಿ ‘ಆರ್ಟಿಸ್ಟಿಕ್‌ ಇಮ್ಯಾಜಿನೇಶನ್‌’ ಎಂದು ಬರೆದಿರುವುದು ಕಾಣುತ್ತದೆ.

ಅಲ್ಲಿಗೆ ಇದು ಆರ್‌ಬಿಐ ಬಿಡುಗಡೆ ಮಾಡಿರುವ ಅಧಿಕೃತ ನೋಟಲ್ಲ ಎಂಬುದು ಸ್ಪಷ್ಟ. ಜೊತೆಗೆ ಕ್ವಿಂಟ್‌ ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಪರಿಶೀಲಿಸಿದಾಗಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ಆರ್‌ಬಿಐ ಕೂಡ ಇದೊಂದು ಸುಳ್ಳು ಸುದ್ದಿ. ಯಾವುದೇ ನಿರ್ಣಯ ಕೈಗೊಂಡರೂ ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗುತ್ತದೆ. ಆದ್ದರಿಂದ ಇಂಥ ಸುಳ್ಳು ಸುದ್ದಿಗಳನ್ನು ನಂಬದಿರಿ ಎಂದು ಸ್ಪಷ್ಟನೆ ನೀಡಿದೆ.

ಅಮೆಜಾನ್ ಕಾಡಲ್ಲಿ 134 ಅಡಿ ಉದ್ದದ ಹಾವು ಪತ್ತೆ?

ಇತ್ತೀಚೆಗೆ ಆರ್‌ಬಿಐ 2000 ಮುಖಬೆಲೆಯ ನೋಟನ್ನು ನಿಷೇಧಿಸಿ 1000 ರು ಮುಖಬೆಲೆಯ ಹೊಸ ನೋಟನ್ನು ಜಾರಿ ಮಾಡುತ್ತದೆ ಎಂಬ ಸುಳ್ಳುಸುದ್ದಿ ವೈರಲ್‌ ಆಗಿತ್ತು.

- ವೈರಲ್ ಚೆಕ್