ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕುರಿತ ಅನೇಕ ಸುಳ್ಳು ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡುತ್ತವೆ. ಸದ್ಯ ನಾಸಾ ಬಳಿ ‘ಕ್ಲೌಂಡ್‌ ಜನರೇಟಿಂಗ್‌ ಮಶೀನ್‌’ ಇದೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆ ವಿಡಿಯೋದಲ್ಲಿ ಮಶೀನ್‌ವೊಂದರಿಂದ ಕೃತಕ ಮೋಡ ಹೊರಬರುವಂತೆ ಕಾಣುವ ದೃಸ್ಯವಿದೆ. ಈ ವಿಡಿಯೋದೊಂದಿದೆ, ‘ಕೃತಕ ಕ್ಲೌಡ್‌ ಜನರೇಟಿಂಗ್‌ ಸಿಸ್ಟಮ್‌’ ಎಂದು ಬರೆದು ಶೇರ್‌ ಮಾಡಲಾಗುತ್ತಿದೆ. ಈ ವಿಡಿಯೋ 3 ಲಕ್ಷಕ್ಕೂ ಅಧಿಕ ಬಾರಿ ಶೇರ್‌ ಆಗಿದೆ. ಆದರೆ ನಿಜಕ್ಕೂ ನಾಸಾ ಇಂಥದ್ದೊಂದು ತಂತ್ರಜ್ಞಾನವನ್ನು ಶೋಧಿಸಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

ವಾಸ್ತವವಾಗಿ ನಾಸಾ 2018 ಫೆಬ್ರವರಿ 21ರಂದು ಶಕ್ತಿಶಾಲಿಯಾದ ಆರ್‌ಎಸ್‌-25 ಎಂಜಿನ್‌ ಅನ್ನು ಮೆಸಿಸಿಪ್ಪಿಯ ಸ್ಟೆನ್ನಿ ಬಾಹ್ಯಾಕಾಶ ಕೇಂದ್ರದಲ್ಲಿ ಪರೀಕ್ಷಿಸಿತ್ತು. 2015ರಿಂದಲೂ ಈ ಎಂಜಿನ್‌ ಅನ್ನು ನಾಸಾ ಸಿದ್ಧಪಡಿಸುತ್ತಿದೆ. ಎಸ್‌ಎಲ್‌ಎಸ್‌ ರಾಕೆಟ್‌ ಉಡಾವಣೆಗೆ ಈ ಎಂಜಿನ್‌ ಬಳಕೆಯಾಗಲಿದೆ.

ಎಂಜಿನ್‌ ತನ್ನಲ್ಲಿರುವ ದ್ರವ ಹೈಡ್ರೋಜನ್‌ ಮತ್ತು ಲಿಕ್ವಿಡ್‌ ಆಮ್ಲಜನಕವನ್ನು ಬರ್ನ್‌ ಮಾಡುತ್ತದೆ. ಅವೆರಡೂ ಒಟ್ಟು ಸೇರಿ ಎಚ್‌2ಒ ಉತ್ಪತ್ತಿಯಾಗುತ್ತದೆ. ಹಾಗಾಗಿ ವಿಡಿಯೋದಲ್ಲಿ ಲ್ಲಿ ಕಾಣುವ ಮೋಡವು, ವೈಜ್ಞಾನಿಕ ಪ್ರಕ್ರಿಯೆಯ ಉಪ-ಉತ್ಪನ್ನಗಳು ಅಷ್ಟೆ. ಆರ್‌ಎಸ್‌-25 ಸಂಪೂರ್ಣವಾಗಿ ಬರ್ನ್‌ ಆದಾಗ ನೀರಿನ ಆವಿಯಾಗಿ ಘನೀಕೃತಗೊಳ್ಳುತ್ತದೆ. ಅದು ಮಳೆಯಾಗಿ ಬೀಳುವಷ್ಟುದೊಡ್ಡ ಹನಿಗಳನ್ನು ರೂಪಿಸಬಹುದು.

- ವೈರಲ್ ಚೆಕ್