ಫೇಸ್'ಬುಕ್ ಪೇಜ್'ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅವಹೇಳನಕಾರಿ ಪೋಸ್ಟ್

First Published 29, Jan 2018, 9:20 AM IST
Facebook page troll on Kalladka Prabhakar Bhat
Highlights

ಆರ್'ಎಸ್'ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆರ್'ಎಸ್'ಎಸ್ ಸಮವಸ್ತ್ರದಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದೆ.

ಮಂಗಳೂರು (ಜ.29): ಆರ್'ಎಸ್'ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆರ್'ಎಸ್'ಎಸ್ ಸಮವಸ್ತ್ರದಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದೆ.

ಟ್ರೂ ಮೀಡಿಯಾ ನೆಟ್'ವರ್ಕ್ ಫೇಸ್ ಬುಕ್ ಪೇಜ್'ನಲ್ಲಿ ಕಿಡಿಗೇಡಿಗಳು ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ.   "ಅಯ್ಯಯ್ಯೋ ಭಯೋತ್ಪಾಧಕ ಮುದುಕ ಭಟ್ಟಾ... ಮಂಗನಿಂದ ಮಾನವ ಅಂತಾ ಸಾಬೀತು" ಎಂದು ಪೋಸ್ಟ್ ಮಾಡಿ ಅವಮಾನ ಮಾಡಿದ್ದಾರೆ.

ಬಿಳಿ ಶರ್ಟ್ ಜೊತೆ ಪ್ಯಾಂಟ್ ಹಾಕಿ ಗಣವೇಷದಲ್ಲಿ ಕೋಲು ಹಿಡಿದಿರುವ ಪ್ರಭಾಕರ್ ಭಟ್ ಫೋಟೋ ನಿನ್ನೆ ಕೆಲ ಫೇಸ್'ಬುಕ್ ಪೇಜ್'ಗಳಲ್ಲಿ ವೈರಲ್ ಆಗಿತ್ತು. ಇದರಲ್ಲಿ ಆಕ್ಷೇಪಾರ್ಹ ಕಾಮೆಂಟ್ ಗಳನ್ನು ಮಾಡಲಾಗಿತ್ತು.

ಚಡ್ಡಿಯಿಂದ ಪ್ಯಾಂಟ್'ಗೆ ಬರಲು 60 ವರ್ಷ ಬೇಕಾಯ್ತು. ಇನ್ನು  ಅದೇನು ದೇಶ ಸೇವೆ ಮಾಡ್ತೀರಾ ನೀವು ಅಂತ ಕಾಮೆಂಟ್ ಮಾಡಲಾಗಿತ್ತು.

loader