ಹಾಸನ(ಜು.07): ಫೇಸ್'ಬುಕ್'ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಸಂಬಂಧ ವರ್ಷದೊಳಗೆ ಅಂತ್ಯ ಕಂಡಿರುವ ಪ್ರಸಂಗವೊಂದು ನಡೆದಿದೆ. 

ಕಡೂರು ಮೂಲದ ಅಮೂಲ್ಯ ಹಾಗೂ ಹಾಸನ ಜಿಲ್ಲೆ ಅರಸೀಕೆರೆಯ ನವೀನ್, ​ ಫೇಸ್​'ಬುಕ್​'ನಲ್ಲಿ ಪರಿಚಯವಾಗಿ ಮದುವೆ ಆಗಿದ್ದರು. ಬೆಂಗಳೂರಿನಲ್ಲಿ ಆಟೋ ಚಾಲಕನಾಗಿದ್ದ ನವೀನ್​ 6 ತಿಂಗಳ ಹಿಂದೆ ಅಮೂಲ್ಯಳನ್ನ ವರಿಸಿದ್ದ.  ಐದೂವರೆ ತಿಂಗಳು ಜೊತೆಗಿದ್ದ ಅಮೂಲ್ಯ ಮನೆಯವರನ್ನು  ನೋಡಬೇಕು ಅಂತಾ  ಬೆಂಗಳೂರಿನಿಂದ ಊರಿಗೆ ಹೋಗಿದ್ದಾಳೆ.

ಈಗ ಅಮೂಲ್ಯ ಪೋಷಕರು ಆಕೆಯನ್ನು ವಾಪಸ್​ ಕಳುಹಿಸಲು ನಿರಾಕರಿಸ್ತಾ ಇದ್ದಾರೆ . ಇದೀಗ ಆಕೆಯ ಮೊಬೈಲ್​ ಸಹ ಸ್ವಿಚ್​ ಆಫ್​ ಆಗಿದೆ . ಈ ಬಗ್ಗೆ ಹಾಸನ ಎಸ್ಪಿ ಕಚೇರಿಗೆ ದೂರು ನೀಡಿರುವ ನವೀನ್ , ನನಗೆ ನನ್ನ ಹೆಂಡ್ತಿ ಬೇಕು ಕೊಡಿಸಿಕೊಡಿ ಅಂತಾ ಕಣ್ಣೀರು ಹಾಕುತ್ತಾ ಬೇಡ್ತಿದಾನೆ.