ಫೇಸ್‌ಬುಕ್‌ನಲ್ಲಿ ಹಾಕಲಾದ ಪ್ರೊಫೈಲ್‌ ಫೋಟೋಗಳನ್ನು ಡೌನ್‌ಲೋಡ್‌ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಭಾರತದಲ್ಲಿ ಹೊಸ ಟೂಲ್‌ ಒಂದನ್ನು ಪರಿಚಯಿಸಿದೆ.

ಲಾಸ್‌ ಏಂಜಲೀಸ್‌: ಫೇಸ್‌ಬುಕ್‌ನಲ್ಲಿ ಹಾಕಲಾದ ಪ್ರೊಫೈಲ್‌ ಫೋಟೋಗಳನ್ನು ಡೌನ್‌ಲೋಡ್‌ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಭಾರತದಲ್ಲಿ ಹೊಸ ಟೂಲ್‌ ಒಂದನ್ನು ಪರಿಚಯಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಟೂಲ್‌ ಮುಖಾಂತರ ಫೇಸ್‌ಬುಕ್‌ ಬಳಕೆದಾರರಿಗೆ ತಮ್ಮ ಪ್ರೊಫೈಲ್‌ ಫೋಟೊಗಳನ್ನು ರಕ್ಷಿಸಿಕೊಳ್ಳುವ ಅವಕಾಶ ಒದಗಿಸಲಾಗಿದೆ. ಭಾರತದಲ್ಲಿ ಫೇಸ್‌ಬುಕ್‌ನಲ್ಲಿ ಪ್ರತಿಯೊಬ್ಬರಿಗೂ ತಮ್ಮ ಪ್ರೊಫೈಲ್‌ ಚಿತ್ರಗಳನ್ನು ಹಂಚಿಕೊಳ್ಳುವುದು ಸುರಕ್ಷಿತವೆನಿಸುವುದಿಲ್ಲ, ಹೀಗಾಗಿ ಅವರು ತಮ್ಮ ಚಿತ್ರಗಳನ್ನು ಹಂಚಿಕೊಳ್ಳುವುದಿಲ್ಲ. ಭಾವಚಿತ್ರಗಳನ್ನು ಅಪ್‌ಲೋಡ್‌ ಮಾಡುವುದರಿಂದ ಸಮಸ್ಯೆ ಉದ್ಭವವಾಗಬಹುದೆಂದು ಭಾವಿಸಿ, ಕೆಲವು ಮಹಿಳೆಯರು ತಮ್ಮ ಫೋಟೊಗಳನ್ನು ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳುವುದಿಲ್ಲ ಎಂಬ ಅಂಶ ಫೇಸ್‌ಬುಕ್‌ ಸಂಶೋಧನಕಾರರು ಪತ್ತೆಹಚ್ಚಿದ್ದಾರೆ.

ಫೇಸ್‌ಬುಕ್‌ನಲ್ಲಿ ಪ್ರೊಫೈಲ್‌ ಚಿತ್ರ ಗಾರ್ಡ್‌ ಅನ್ನು ಅಳವಡಿಸುವ ಆಯ್ಕೆಯಿದೆ. ಅದರಲ್ಲಿ ನೀಡಲಾಗುವ ಸೂಚನೆಯನುಸಾರ ಪ್ರೊಫೈಲ್‌ ಚಿತ್ರ ಗಾರ್ಡ್‌ ಅಳವಡಿಸಿದಲ್ಲಿ, ಯಾರೊಬ್ಬರಿಗೂ ಆ ಚಿತ್ರಗಳನ್ನು ಡೌನ್‌ಲೋಡ್‌, ಶೇರ್‌ ಅಥವಾ ಕಳುಹಿಸಲು ಸಾಧ್ಯವಾಗುವುದಿಲ್ಲ.