ಅಮೆರಿಕಕ್ಕೆ ಭೇಟಿ ನೀಡಲು ವೀಸಾಗೆ ಅರ್ಜಿ ಸಲ್ಲಿಸಿದ್ದೀರಾ? ಹಾಗಿ ದ್ದರೆ ಅಧಿಕಾರಿಗಳು ನಿಮ್ಮ ಫೇಸ್ಬುಕ್ ಖಾತೆಯಲ್ಲಿನ ವಿವರವನ್ನೂ ಕೇಳಬಹುದು!
ವಾಷಿಂಗ್ಟನ್(ಜೂ.02): ಅಮೆರಿಕಕ್ಕೆ ಭೇಟಿ ನೀಡಲು ವೀಸಾಗೆ ಅರ್ಜಿ ಸಲ್ಲಿಸಿದ್ದೀರಾ? ಹಾಗಿ ದ್ದರೆ ಅಧಿಕಾರಿಗಳು ನಿಮ್ಮ ಫೇಸ್ಬುಕ್ ಖಾತೆಯಲ್ಲಿನ ವಿವರವನ್ನೂ ಕೇಳಬಹುದು!
ಅಮೆರಿಕಕ್ಕೆ ಭೇಟಿ ನೀಡುವವರ ಪರಿಶೀಲನೆಯನ್ನು ಮತ್ತಷ್ಟುಕಟ್ಟುನಿಟ್ಟಾಗಿಸಲು ಮುಂದಾಗಿರುವ ಡೊನಾಲ್ಡ್ ಟ್ರಂಪ್ ಸರ್ಕಾರ, ವೀಸಾ ಅರ್ಜಿದಾರರಿಗಾಗಿ ಹೊಸ ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಿದೆ. ಇದು ಟೀಕೆಗಳಿಗೂ ಆಹಾರವಾಗಿದೆ.
ಪ್ರಶ್ನಾವಳಿಯಲ್ಲಿರುವ ಹೊಸ ಅಂಶಗಳ ಪ್ರಕಾರ, ವೀಸಾ ಕೋರಿ ಅರ್ಜಿ ಸಲ್ಲಿಸಿದವರಿಂದ ದೂತಾವಾಸ ಅಧಿಕಾರಿಗಳು ಈ ಹಿಂದೆ ಹೊಂದಿದ್ದ ಎಲ್ಲ ಪಾಸ್ಪೋರ್ಟ್ಗಳ ವಿವರಗಳನ್ನು ಬಯಸಬಹುದು. ಫೇಸ್ಬುಕ್, ಟ್ವೀಟರ್ನಂತಹ ಸಾಮಾಜಿಕ ಜಾಲ ತಾಣಗಳಲ್ಲಿನ ಐದು ವರ್ಷದ ಚಟುವಟಿಕೆ, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ, ವಿಳಾಸ, ಉದ್ಯೋಗ, ಪ್ರಯಾಣ ಇತಿಹಾಸವನ್ನು ಒಳಗೊಂಡ 15 ವರ್ಷಗಳ ಜೈವಿಕ ಮಾಹಿತಿಯನ್ನು ಕೇಳಬಹುದಾಗಿದೆ.
