ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಫೇಸ್‌ಬುಕ್ ಅಭಿಯಾನ  ನೆರವು ನೀಡಲು ಮುಂದಾದ ಫೇಸ್‌ಬುಕ್ 

ತಿರುವನಂತಪುರ (ಆ. 20): ಪ್ರವಾಹದ ಹಿನ್ನೆಲೆಯಲ್ಲಿ ಕೇರಳದ 3 ಲಕ್ಷ ಮಂದಿ 3 ಸಾವಿರ ನಿರಾಶ್ರಿತರ ಕೇಂದ್ರಗಳಲ್ಲಿ ತಂಗಿದ್ದಾರೆ. ಅವರಿಗೆ ಕಾಣಿಸಿಕೊಂಡಿರುವ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಫೇಸ್‌ಬುಕ್‌ನಲ್ಲಿ ಅಭಿಯಾನ ಆರಂಭವಾಗಿದೆ.

ನೀಲಂಬೂರಿನ ಸಂಚಾರಿ ಚಿಕಿತ್ಸಾ ಘಟಕದ ವೈದ್ಯಕೀಯ ಅಧಿಕಾರಿಯಾಗಿರುವ ಅಸ್ವತಿ ಸೋಮನ್ ಅವರು ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ 10 ವೈದ್ಯರ ಸಹಾಯದಿಂದ ರೋಗಿಗಳ ಪ್ರಶ್ನೆಗಳಿಗೆ ಫೇಸ್‌ಬುಕ್ ಮೂಲಕವೇ ಉತ್ತರ ನೀಡುವ ವ್ಯವಸ್ಥೆ ಮಾಡಿದ್ದಾರೆ.