ಸಿಕ್ಕಿಂ'ನ ದೋಕಾ ಲಾ ಸಾರ್ವತ್ರಿಕ ಪ್ರದೇಶದಲ್ಲಿ ಕಳೆದ 10 ದಿನಗಳಿಂದ 2 ಸೇನೆಗಳು ಮುಖಾಮುಖಿಯಾಗಿವೆ. ಅಲ್ಲದೆ ಕೈಲಾಶ್ ಮಾನಸರೋವರ ಯಾತ್ರೆಗಾಗಿ ತೆರಳುತ್ತಿದ್ದ ಪ್ರವಾಸಿಗರ ತಂಡದ ಪ್ರವೇಶವನ್ನು ಚೀನಾ ಸರ್ಕಾರ ಸ್ಥಗಿತಗೊಳಿಸಿದೆ' ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನವದೆಹಲಿ(ಜೂ.26): ಚೀನಾ ಮತ್ತೆ ತನ್ನ ಕ್ಯಾತೆ ತೆಗೆದಿದೆ. ಸಿಕ್ಕಿಂ ವಲಯ ಪ್ರವೇಶಿಸಿದ ಚೀನಾ ಪಡೆಗಳು ಇಂಡೋ ಚೀನಾ ಗಡಿಭಾಗದಲ್ಲಿ ಭಾರತೀಯ ಸೇನೆಯ ಜೊತೆ ಕಾದಾಟಕ್ಕಿಳಿದು 2 ಬಂಕರ್'ಗಳನ್ನು ನಾಶ ಮಾಡಿದೆ.

ಸಿಕ್ಕಿಂ'ನ ದೋಕಾ ಲಾ ಸಾರ್ವತ್ರಿಕ ಪ್ರದೇಶದಲ್ಲಿ ಕಳೆದ 10 ದಿನಗಳಿಂದ 2 ಸೇನೆಗಳು ಮುಖಾಮುಖಿಯಾಗಿವೆ. ಅಲ್ಲದೆ ಕೈಲಾಶ್ ಮಾನಸರೋವರ ಯಾತ್ರೆಗಾಗಿ ತೆರಳುತ್ತಿದ್ದ ಪ್ರವಾಸಿಗರ ತಂಡದ ಪ್ರವೇಶವನ್ನು ಚೀನಾ ಸರ್ಕಾರ ಸ್ಥಗಿತಗೊಳಿಸಿದೆ' ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತೀಯ ಸೇನೆ ಕೂಡ ದೇಶೀಯ ಭೂಪ್ರದೇಶಕ್ಕೆ ಯಾವುದೇ ಚೀನಾ ಪಡೆಗಳಿಂದ ಯಾವುದೇ ಅನಾಹುತವಾಗದಂತೆ ಶಕ್ತಿ ಮೀರಿ ಪ್ರತಿರೋದ ಒಡ್ಡಿ ಚೀನಾ ಸೇನಾಯ ಗಡಿ ಪ್ರವೇಶವನ್ನು ತಡೆದಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಮಾನವ ಸರಪಣಿ ನಿರ್ಮಿಸಿ ಚೀನಾ ಅತಿಕ್ರಮಣವನ್ನು ನಿಲ್ಲಿಸಲಾಗಿದೆ.

ಎರಡೂ ಸೇನೆಗಳ ಹಿರಿಯ ಅಧಿಕಾರಿಗಳ ನಡುವೆ ಜೂನ್.20ರಂದು ಧ್ವಜಸ್ತಂಭ ಮಾತುಕತೆ ನಡೆದಿದ್ದು, ಆದಾಗ್ಯು ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. 2008ರ ನವೆಂಬರ್'ನಲ್ಲೂ ಕೂಡ ಇದೇ ಪ್ರದೇಶದಲ್ಲಿ ಚೀನಾ ಪಡೆ ಬಂಕರ್'ಗಳನ್ನು ನಾಶಗೊಳಿಸಿತ್ತು. 1962ರ ಭಾರತ ಚೀನಾ ಯುದ್ಧದ ನಂತರ ಚೀನಾವು ಭಾರತದ ಅರುಣಾಚಲ ಪ್ರದೇಶ ಭೂಭಾಗವನ್ನು ತನ್ನದೆಂದು ವಾದಿಸುತ್ತಿದೆ. ಅಲ್ಲದೆ 1990ರ ಆರಂಭದಿಂದಲೂ 2 ದೇಶಗಳ ನಡುವೆ ಸುಮಾರು 20 ಬಾರಿ ಮತುಕತೆ ನಡೆದಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.