ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅಚ್ಛೇ ದಿನ್ ಬಂದವೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ತವರು ರಾಜ್ಯ ಗುಜರಾತ್‌'ನಲ್ಲಿ ಮದ್ಯ ನಿಷೇಧ ಇದ್ದರೂ ಮದ್ಯ ಪ್ರಿಯರಿಗೆ ಮಾತ್ರ ಭಾನುವಾರ ಅಚ್ಛೇ ದಿನ್ ಬಂದೇ ಬಿಟ್ಟಿತು.

ಅಹಮದಾಬಾದ್(ಅ.17): ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅಚ್ಛೇ ದಿನ್ ಬಂದವೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ತವರು ರಾಜ್ಯ ಗುಜರಾತ್‌'ನಲ್ಲಿ ಮದ್ಯ ನಿಷೇಧ ಇದ್ದರೂ ಮದ್ಯ ಪ್ರಿಯರಿಗೆ ಮಾತ್ರ ಭಾನುವಾರ ಅಚ್ಛೇ ದಿನ್ ಬಂದೇ ಬಿಟ್ಟಿತು.

ವಡೋದರಾ ಸಮೀಪದ ದುಮಾಡ್ ಹೈವೇನಲ್ಲಿ ಅಕ್ರಮವಾಗಿ ಮದ್ಯದ ಟಿನ್‌'ಗಳನ್ನು ತುಂಬಿಕೊಂಡು ಹೊರಟ ಕಾರ್ ಅಪಘಾತಕ್ಕೀಡಾಯಿತು. ಕೂಡಲೇ ಅಕ್ಕಪಕ್ಕದ ಜನರು ಮುಗಿಬಿದ್ದು ಎಲ್ಲ ಕ್ಯಾನ್ ಗಳನ್ನು ಬಾಚಿಕೊಂಡರು. ‘ಅಚ್ಛೇ ದಿನ್ ಆಗಯೇ’ ಎಂದು ಸ್ಥಳದಿಂದ ಕಾಲ್ಕಿತ್ತು ಪಾರ್ಟಿ ಮಾಡಿದರು!