ಲಾಸ್ ಎಂಜಿಲಿಸ್(ಮೇ.17): ದೈನಂದಿನ ತರಬೇತಿಗಾಗಿ ಹಾರಾಟ ನಡೆಸುತ್ತಿದ್ದ ಅಮೆರಿಕದ ಎಫ್-16 ಯುದ್ಧ ವಿಮಾನ, ಪೈಲೆಟ್ ನಿಯಂತ್ರಣ ತಪ್ಪಿ ಕಟ್ಟಡದ ಮೇಲೆ ಅಪಘಾತಕ್ಕೀಡಾದ ಘಟನೆ ನಡೆದಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಮಾರ್ಚ್ ಏರ್ ರಿಸರ್ವ್ ಬೇಸ್ ಬಳಿ ಪೈಲೆಟ್ ನಿಯಂತ್ರಣ ತಪ್ಪಿದ ಎಫ್-16 ಯುದ್ಧ ವಿಮಾನ, ಕಟ್ಟಡದ ಛಾವಣಿಗೆ ಡಿಕ್ಕಿ ಹೊಡೆದು ಧ್ವಂಸಗೊಂಡಿದೆ. ಈ ವೇಳೆ ಪೈಲೆಟ್ ಪ್ಯಾರಾಚೂಟ್ ಸಹಾಯದ ಮೂಲಕ ಹಾರಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.

ಇನ್ನು ಯುದ್ಧ ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿದ್ದು, ಪೈಲೆಟ್ ಸೇರಿದಂತೆ ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.