ಕೆಲವೊಂದು ದೇಶಗಳ ಪ್ರಜೆಗಳಿಗೆ ನಿರ್ಬಂಧವಿರುವುದು, ಇನ್ನು ಕೆಲವರಿಗೆ ತೀವ್ರವಾದ ಪರಿಶೀಲನೆ ನಡೆಸಲಾಗುವುದು. ಈ ದೇಶದಲ್ಲಿ ಯಾವುದೇ ರೀತಿಯ ಆತಂಕಕ್ಕೆ ಆಸ್ಪದ ಕೊಡಲಾಗದು, ಎಂದು ಟ್ರಂಪ್ ಹೇಳಿದ್ದಾರೆ.
ವಾಷಿಂಗ್ಟನ್ (ಜ.27): ಇನ್ಮುಂದೆ ಅಮೆರಿಕಾಕ್ಕೆ ಹೋಗಲು ಬಯಸುವ ಸೌದಿ ಅರೇಬಿಯಾ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ದೇಶಗಳ ಪ್ರಜೆಗಳನ್ನು ತೀವ್ರವಾದ ಪರಿಶೀಲನೆಗೊಳಪಡಿಸಲಾಗುವುದೆಂದು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸ್ಥಳಿಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಸೌದಿ ಅರೇಬಿಯಾ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಪ್ರಜೆಗಳನ್ನು ತೀವ್ರವಾದ ಪರಿಶೀಲನೆಗೊಳಪಡಿಸಲಾಗುವುದು. ಸ್ವಲ್ಪವೂ ಸಮಸ್ಯೆ ಕಂಡು ಬಂದಲ್ಲಿ ಅವರಿಗೆ ವೀಸಾ ನಿರಾಕರಿಸಲಾಗುವುದೆಂದು ಟ್ರಂಪ್ ಹೇಳಿದ್ದಾರೆ.
ಕೆಲವೊಂದು ದೇಶಗಳ ಪ್ರಜೆಗಳಿಗೆ ನಿರ್ಬಂಧವಿರುವುದು, ಇನ್ನು ಕೆಲವರಿಗೆ ತೀವ್ರವಾದ ಪರಿಶೀಲನೆ ನಡೆಸಲಾಗುವುದು. ಈ ದೇಶದಲ್ಲಿ ಯಾವುದೇ ರೀತಿಯ ಆತಂಕಕ್ಕೆ ಆಸ್ಪದ ಕೊಡಲಾಗದು, ಎಂದು ಟ್ರಂಪ್ ಹೇಳಿದ್ದಾರೆ.
ಈ ಕ್ರಮಗಳನ್ನು ಮುಸ್ಲಿಮರಿಗೆ ಹೇರಲಾಗುವ ನಿರ್ಬಂಧವೆಂದು ಭಾವಿಸಬಾರದು, ಬದಲಾಗಿ ಭಯೋತ್ಪಾದನೆ ಕಂಡು ಬರುವ ದೇಶಗಳಿಗೆ ಮಾತ್ರವೆಂದು ಸೀಮಿತವಾಗಿದೆ ಎಂದು ಟ್ರಂಪ್ ಸ್ಪಷ್ಟೀಕರಣ ನೀಡಿದ್ದಾರೆ.