Asianet Suvarna News Asianet Suvarna News

ಬಹುನಿರೀಕ್ಷಿತ ಬಜೆಟ್ 2017: ತೆರಿಗೆದಾರರ ಮನಸ್ಸಲ್ಲಿ ನೂರಾರು ನಿರೀಕ್ಷೆ

ಇವತ್ತು ಬಜೆಟ್ ಮಂಡನೆ ಆಗಲಿದೆ. ಇದು ನೋಟ್​'ಬ್ಯಾನ್ ನಂತರದ ಮೊತ್ತ ಮೊದಲ ಬಜೆಟ್. ಈ ಬಜೆಟ್​ ಬಗ್ಗೆ ನಿರೀಕ್ಷೆಗಳು ತುಂಬಾ ಇವೆ. ಅದರಲ್ಲೂ ತೆರಿಗೆದಾರರು. ತೆರಿಗೆದಾರರ ನಿರೀಕ್ಷೆಗೆ ತಕ್ಕಂತೆ, ಆರ್ಥಿಕ ಸಮೀಕ್ಷೆಯೂ ಇದೆ. ಹೀಗಾಗಿಯೇ ತೆರಿಗೆದಾರರ ಕಣ್ಣಲ್ಲಿ ನೂರಾರು ನಿರೀಕ್ಷೆ.

Expectation Of Tax Payer From Budget 2017

ನವದೆಹಲಿ(ಫೆ.01): ಇವತ್ತು ಬಜೆಟ್ ಮಂಡನೆ ಆಗಲಿದೆ. ಇದು ನೋಟ್​'ಬ್ಯಾನ್ ನಂತರದ ಮೊತ್ತ ಮೊದಲ ಬಜೆಟ್. ಈ ಬಜೆಟ್​ ಬಗ್ಗೆ ನಿರೀಕ್ಷೆಗಳು ತುಂಬಾ ಇವೆ. ಅದರಲ್ಲೂ ತೆರಿಗೆದಾರರು. ತೆರಿಗೆದಾರರ ನಿರೀಕ್ಷೆಗೆ ತಕ್ಕಂತೆ, ಆರ್ಥಿಕ ಸಮೀಕ್ಷೆಯೂ ಇದೆ. ಹೀಗಾಗಿಯೇ ತೆರಿಗೆದಾರರ ಕಣ್ಣಲ್ಲಿ ನೂರಾರು ನಿರೀಕ್ಷೆ.

ನೋಟ್​ಬ್ಯಾನ್ ನಂತರದ ಮೊತ್ತ ಮೊದಲ ಬಜೆಟ್. ನಾಗರಿಕರ ಕಣ್ಣಲ್ಲಿ ಸಾವಿರ ಸಾವಿರ ನಿರೀಕ್ಷೆ. ಅದರಲ್ಲೂ ತೆರಿಗೆದಾರರು ನೂರಾರು ಆಸೆ ಕಟ್ಟಿಕೊಂಡಿದ್ದಾರೆ. ತೆರಿಗೆದಾರರೆಂದರೆ, ಸಂಬಳದಾರರಷ್ಟೇ ಅಲ್ಲ, ಉದ್ಯಮಿಗಳು, ವ್ಯಾಪಾರಿಗಳು, ಕೃಷಿಕರು ಹೀಗೆ ಎಲ್ಲರ ಕಣ್ಣಲ್ಲೂ ಆಸೆಯ ಸೆಳೆತವಿದೆ. ಆದರೆ ಈಗಿರುವ ತೆರಿಗೆ ಲೆಕ್ಕಾಚಾರ ಹೇಗಿದೆ?

ಬಹುನಿರೀಕ್ಷಿತ ಬಜೆಟ್ TAX ಲೆಕ್ಕಾಚಾರ

-2.5 ಲಕ್ಷದವರೆಗೆ - ಯಾವುದೇ ತೆರಿಗೆ ಇಲ್ಲ

-2.5 ಲಕ್ಷದಿಂದ 5 ಲಕ್ಷ - ಶೇ. 10 ತೆರಿಗೆ

-5 ಲಕ್ಷದಿಂದ 10 ಲಕ್ಷ - ಶೇ. 20 ತೆರಿಗೆ

-10 ಲಕ್ಷದಿಂದ 1 ಕೋಟಿ - ಶೇ. 30 ತೆರಿಗೆ

-1 ಕೋಟಿ ರೂ. ಮೇಲ್ಪಟ್ಟು - ಶೇ. 30 ತೆರಿಗೆ & ಶೇ.15 ಸರ್​ಚಾರ್ಜ್​

ಹೀಗೆ ತೆರಿಗೆ ಕಟ್ಟುವವರೆಲ್ಲರ ನಿರೀಕ್ಷೆ ಹೆಚ್ಚಿಸಿರುವುದು ಆರ್ಥಿಕ ಸಮೀಕ್ಷೆಯ ವರದಿ. ಏಕೆಂದರೆ, ಆ ಸಮೀಕ್ಷೆಯಲ್ಲಿ ತೆರಿಗೆ ಇಳಿಸುವ ಪ್ರಸ್ತಾಪಗಳಿವೆ.


ತೆರಿಗೆದಾರರಿಗೆ ಆರ್ಥಿಕ ಸಮೀಕ್ಷೆಯ ಸಂದೇಶ

-ವೈಯಕ್ತಿಕ ತೆರಿಗೆ ಇಳಿಸಬೇಕು

-ರಿಯಲ್ ಎಸ್ಟೇಟ್ ಮುದ್ರಾಂಕ ಶುಲ್ಕ ಇಳಿಸಬೇಕು

-ಕಾರ್ಪೊರೇಟ್ ತೆರಿಗೆ ಇಳಿಕೆ ಪ್ರಕ್ರಿಯೆ ಚುರುಕಾಗಬೇಕು

-ತೆರಿಗೆ ವಸೂಲಿ ಕ್ರಮ, ತೆರಿಗೆ ಕಿರುಕುಳವಾಗಬಾರದು

-ಜಿಎಸ್​ಟಿ ಮತ್ತು ಇತರೆ ತೆರಿಗೆಗಳ ಸುಧಾರಣೆ ಆಗಬೇಕು

ಹೀಗೆ, ಆರ್ಥಿಕ ಸಮೀಕ್ಷೆಯಲ್ಲಿ ಕಾಣುತ್ತಿರುವುದೆಲ್ಲ ತೆರಿಗೆ ಸುಧಾರಣೆ ಅಂಶಗಳೇ..ಇವೆಲ್ಲವೂ ನಿರೀಕ್ಷೆಯಂತೆಯೇ ಆದರೆ.

ತೆರಿಗೆ ಹೊರೆ ಇಳಿಯುತ್ತಾ..?

ಸದ್ಯಕ್ಕೆ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷದಿಂದ 3 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಗಳು ದಟ್ಟವಾಗಿ ಕೇಳಿ ಬರುತ್ತಿವೆ. ಇನ್ನು ರಿಯಲ್ ಎಸ್ಟೇಟ್ ಮುದ್ರಾಂಕ ಶುಲ್ಕ ಇಳಿದರೆ, ರಿಯಲ್ ಎಸ್ಟೇಟ್ ಚುರುಕುಗೊಳ್ಳುತ್ತೆ. ವೈಟ್​ಮನಿಯಲ್ಲಿಯೇ ನಡೆಯುವ ವ್ಯವಹಾರ ದೇಶಕ್ಕೆ ಯಾವತ್ತೂ ಲಾಭದಾಯಕ. ಇನ್ನು ತೆರಿಗೆ ಕಿರುಕುಳ ತಪ್ಪಿದರೆ, ತೆರಿಗೆ ಕಟ್ಟುವವರ ಬದ್ಧತೆ ಹೆಚ್ಚುತ್ತೆ. ಕಾರ್ಪೊರೇಟ್ ತೆರಿಗೆ ಇಳಿದರೆ, ಆದಾಯ ಹೆಚ್ಚುತ್ತೆ. ಗೃಹ ಸಾಲ ತೆರಿಗೆ ವಿನಾಯಿತಿ ಮಿತಿ ಹೆಚ್ಚಳವಾದರೆ, ಮನೆ ಕಟ್ಟುವವರ ಕನಸಿಗೆ ದಾರಿದೀಪವಾಗುತ್ತೆ.

ಹೀಗೆ, ನಿರೀಕ್ಷೆಗಳು ಭರ್ಜರಿಯಾಗಿವೆ. ಆ ಎಲ್ಲ ನಿರೀಕ್ಷೆಗಳಲ್ಲಿ ಯಾವುದು ಈಡೇರುತ್ತೆ..? ಯಾವುದು ಗಗನಕುಸುಮವಾಗುತ್ತೆ..? ಎಲ್ಲವೂ ಜೇಟ್ಲಿ ಲೆಕ್ಕದಲ್ಲಿ ಬಯಲಾಗಲಿದೆ.

 

Follow Us:
Download App:
  • android
  • ios