ನೋಟ್​ಬ್ಯಾನ್ ಬಳಿಕ ಈ ಬಾರಿಯ ಬಜೆಟ್, ಈ ಹಿಂದಿನ ಎಲ್ಲ ಬಜೆಟ್​ಗಳಿಗಿಂತ ಹೆಚ್ಚು ನಿರೀಕ್ಷೆ ಮೂಡಿಸಿರುವುದು ಇದೇ ಕಾರಣಕ್ಕೆ. ಈ ನೋಟ್​'ಬ್ಯಾನ್​ ನಂತರದ ಬಜೆಟ್, ಇದೇ ಕಾರಣಕ್ಕೆ ಕುತೂಹಲ ಮೂಡಿಸಿದೆ.

ನವದೆಹಲಿ(ಫೆ.01): ನೋಟ್​ಬ್ಯಾನ್ ಬಳಿಕ ಈ ಬಾರಿಯ ಬಜೆಟ್, ಈ ಹಿಂದಿನ ಎಲ್ಲ ಬಜೆಟ್​ಗಳಿಗಿಂತ ಹೆಚ್ಚು ನಿರೀಕ್ಷೆ ಮೂಡಿಸಿರುವುದು ಇದೇ ಕಾರಣಕ್ಕೆ. ಈ ನೋಟ್​'ಬ್ಯಾನ್​ ನಂತರದ ಬಜೆಟ್, ಇದೇ ಕಾರಣಕ್ಕೆ ಕುತೂಹಲ ಮೂಡಿಸಿದೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಇಂಥಾದ್ದೊಂದು ಘೋಷಣೆ ಮೊಳಗಿಸಿದ ನಂತರ, ದೇಶದ ಅರ್ಥವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪರ-ವಿರೋಧ ಚರ್ಚೆಯಲ್ಲಿ ಮೋದಿಯ ಹೆಜ್ಜೆಗೆ ಜನಬೆಂಬಲವಂತೂ ಸಿಕ್ಕಿದೆ. ಈಗ ಜನ ಆ ನೋಟ್​'ಬ್ಯಾನ್​'ನ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ ಈ ಬಜೆಟ್​ನಲ್ಲಿ.

ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ..?

ಆರ್​'ಬಿಐಗೆ ಬಂದ ಒಟ್ಟು ಹಣ ಎಷ್ಟು..?

ಬ್ಯಾಂಕ್​ಗೆ ಬಂದ ಹಣವನ್ನು ಏನು ಮಾಡ್ತಾರೆ..?

ದೇಶದಲ್ಲಿ ಸಿಕ್ಕ ಒಟ್ಟು ಕಪ್ಪುಹಣ ಎಷ್ಟು..?

ಕಪ್ಪುಹಣ ಹೊಂದಿದ್ದವರಿಗೆ ಏನು ಶಿಕ್ಷೆ..?

ಇಂಥ ಕಥೆಗಳೂ ಇವೆ..!

ಇದರ ಮಧ್ಯೆ ಜನ್​ಧನ್ ಖಾತೆಗೆ ಮೋದಿ ಹಣ ಹಂಚಿಬಿಡ್ತಾರಂತೆ, ರೈತರಿಗೆಲ್ಲ ಉಚಿತವಾಗಿ ಕೃಷಿ ಸಾಲ ಕೊಡ್ತಾರಂತೆ ಅನ್ನೋ ಕಥೆಗಳೂ ಇವೆ. ಆದರೆ, ಇಂಥ ಗಾಳಿಮಾತುಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ನೋಟ್​​ಬ್ಯಾನ್ ನಂತರ ಚಿಗುರಿಕೊಂಡಿರುವುದು ಆನ್​ಲೈನ್ ಬ್ಯುಸಿನೆಸ್. ಬ್ಯಾಂಕುಗಳಲ್ಲಿ ನಗದು ಹಣವೇ ಸಿಗುತ್ತಿಲ್ಲ. ಹೀಗಿರುವಾಗ ಡಿಜಿಟಲ್ ವಹಿವಾಟಿಗೆ ಒಂದಿಷ್ಟು ಉತ್ತೇಜನ ಸಿಗುವ ಮಾತುಗಳಂತೂ ಇವೆ.

ನೋಟ್​ಬ್ಯಾನ್ ಎಫೆಕ್ಟ್ ಏನಾಗಬಹುದು?

ಇದಕ್ಕೆ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳಿಗೆ ತೆರಿಗೆ ವಿನಾಯಿತಿ ಕೊಡುವುದು, ಇಂಟರ್​ನೆಟ್ ಸೇವೆಯನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸುವುದು, ಸ್ಕೂಲು, ಆಸ್ಪತ್ರೆ, ರೈಲು, ವಿಮಾನ ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಪಡೆಯುವವರಿಗೆ ತೆರಿಗೆ ವಿನಾಯಿತಿ ಮತ್ತು ಸೇವೆಯಲ್ಲಿ ರಿಯಾಯಿತಿ ಘೋಷಿಸಬಹುದು ಇಂತಹ ಯೋಜನೆಗಳೇನೋ ಇವೆ.
ವ್ಯಾಪಾರಿಗಳಿಗೆ ಏನು..?

ಇನ್ನು ನೋಟ್​ಬ್ಯಾನ್'​ನಲ್ಲಿ ಹೆಚ್ಚು ನಲುಗಿದ್ದು ವ್ಯಾಪಾರಿಗಳು. ಇವರ ಅನುಕೂಲಕ್ಕಾಗಿ ಪಿಎಸ್​ಒ ಅಂದರೆ, ಕಾರ್ಡ್​ ಸ್ವೈಪ್ ಯಂತ್ರಗಳ ಬೆಲೆ ಕಡಿಮೆಯಾಗಬಹುದು. ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕೊಡುವ ಸಾಧ್ಯತೆಗಳೂ ಇವೆ. ಸರ್ಕಾರಿ ಌಪ್​ ಬಳಕೆದಾರರಿಗೆ ಕ್ಯಾಶ್

​ಬ್ಯಾಕ್ ಸ್ಕೀಂ ತರುವ ಮೂಲಕ ಡಿಜಿಟಲ್ ಬ್ಯಾಂಕಿಂಗ್​ಗೆ ಉತ್ತೇಜನ ಕೊಡಬಹುದು. ಜೊತೆಯಲ್ಲಿ ಸೇಲ್ ಟ್ಯಾಕ್ಸ್​ ಇಳಿಸುವ ಸಾಧ್ಯತೆಯೂ ಇದೆ.

ಈ ಎಲ್ಲದರ ನಡುವೆಯೂ ಸರ್ಕಾರದ ಬಹುದೊಡ್ಡ ಜವಾಬ್ದಾರಿ, ಡಿಜಿಟಲ್ ಸೆಕ್ಯುರಿಟಿ. ಆನ್​ಲೈನ್ ವಹಿವಾಟಿಗೆ ಉತ್ತೇಜನ ಕೊಡುವಾಗ, ಆನ್​ಲೈನ್ ಮಾಹಿತಿಯೂ ಅಷ್ಟೇ ಭದ್ರವಾಗಿರಬೇಕು. ಈ ಬಗ್ಗೆ ಸರ್ಕಾರ ರಚನಾತ್ಮಕ ಹೆಜ್ಜೆ ಇಡಲೇಬೇಕು. ಏಕೆಂದರೆ, ಡಿಜಿಟಲ್ ಆಗಿ ಎನ್ನುತ್ತಿರುವ ಸರ್ಕಾರ, ಮೊದಲು ತಾನು ಡಿಜಿಟಲ್ ಆಗಬೇಕು.