ದುಬೈಯಲ್ಲಿ ಕೂತು ಭಾರತೀಯ ಪತ್ರಕರ್ತೆಯ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಭಾರತೀಯನನ್ನು ಕೆಲಸದಿಂದ ವಜಾ ಮಾಡಿದ ಯುಏಇ ಕಂಪನಿ
ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಪತ್ರೆಕರ್ತೆಯೊಬ್ಬರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಯುಏಇ ಕಂಪನಿಯು ಸೇವೆಯಿಂದ ವಜಾಗೊಳಿಸಿರುವ ಘಟನೆ ನಡೆದಿದೆ.
ಖ್ಯಾತ ತನಿಖಾ ಪತ್ರಕರ್ತರಾಗಿರುವ ರಾಣಾ ಅಯ್ಯೂಬ್ ವಿರುದ್ಧ ಟ್ವೀಟರ್’ನಲ್ಲಿ ಕೇರಳದ ಯುವಕನೊಬ್ಬ ಅಶ್ಲೀಲ ಬೈಗುಳಗಳನ್ನು ಪೋಸ್ಟ್ ಮಾಡಿದ್ದನು. ಈ ವಿಷಯವನ್ನು ರಾಣಾ ಸ್ನೇಹಿತರು ಆತ ದುಬೈಯಲ್ಲಿ ಕೆಲಸ ಮಾಡುತ್ತಿದ್ದ ಆಲ್ಫಾ ಪೇಯಿಂಟ್ ಕಂಪನಿಯ ಗಮನಕ್ಕೆ ತಂದಿದ್ದರು.
ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಂಪನಿಯು ಆ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಿದೆ.
