ಕಲಬುರಗಿಯಲ್ಲಿ  ಇಂದಿನಿಂದ 2 ದಿನಗಳ ಕಾಲ ಬಿಜೆಪಿ ರಾಜ್ಯಕಾರ್ಯಕಾರಿಣಿ ಸಭೆ ನಡೆಯಲಿದೆ. ಆದರೆ ಈ ಸಭೆ ಭಿನ್ನಮತಕ್ಕೆ ತೇಪೆ ಹಾಕುತ್ತಾ ಅಥವಾ  ಭಿನ್ನಮತ ಸ್ಫೋಟಕ್ಕೆ ವೇದಿಕೆಯಾಗುತ್ತಾ ಗೊತ್ತಿಲ್ಲ. ಯಾಕೆಂದರೆ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಪರ್ಯಾಯವಾಗಿ ಬ್ರಿಗೇಟ್ ಸಮಾವೇಶ ನಡೆಯಲಿದೆ.

ಕಲಬುರಗಿ(ಜ.21): ಕಲಬುರಗಿಯಲ್ಲಿ ಇಂದಿನಿಂದ 2 ದಿನಗಳ ಕಾಲ ಬಿಜೆಪಿ ರಾಜ್ಯಕಾರ್ಯಕಾರಿಣಿ ಸಭೆ ನಡೆಯಲಿದೆ. ಆದರೆ ಈ ಸಭೆ ಭಿನ್ನಮತಕ್ಕೆ ತೇಪೆ ಹಾಕುತ್ತಾ ಅಥವಾ ಭಿನ್ನಮತ ಸ್ಫೋಟಕ್ಕೆ ವೇದಿಕೆಯಾಗುತ್ತಾ ಗೊತ್ತಿಲ್ಲ. ಯಾಕೆಂದರೆ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಪರ್ಯಾಯವಾಗಿ ಬ್ರಿಗೇಟ್ ಸಮಾವೇಶ ನಡೆಯಲಿದೆ.

ಇಂದಿನಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ: ಪಕ್ಷದಲ್ಲಿನ ಭಿನ್ನಮತ ಶಮನವಾಗುತ್ತಾ, ಸ್ಫೋಟಗೊಳ್ಳುತ್ತಾ?

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಕೆ.ಎಸ್ ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ . ಯಡಿಯೂರಪ್ಪ ನಡುವೆ ಬಹಿರಂಗ ಸಮರ ನಡೆಯುತ್ತಲೆ ಇದೆ. ಈ ನಡುವೆ ಅತೃಪ್ತರ ಬಣದ ಪತ್ರ ಸಮರದಿಂದ ಬಿಜೆಪಿಯಲ್ಲಿ ಭಿನ್ನಮತ ತಾರಕ್ಕೇರಿದೆ. ಈ ಮಧ್ಯೆ ಇಂದಿನಿಂದ ಎರಡು ದಿನಗಳ ಕಾಲ ಕಲಬುರಗಿಯಲ್ಲಿ ಬಿಜೆಪಿ ರಾಜ್ಯಕಾರ್ಯಕಾರಣಿ ಸಭೆ ನಡೆಯಲಿದೆ. 14 ವರ್ಷಗಳ ನಂತರ ಕಲಬುರಗಿಯಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಸಭೆ, ಪಕ್ಷಕ್ಕೆ ಬಲ ತುಂಬುವಲ್ಲಿ ಯಶಸ್ವಿಯಾಗುತ್ತಾ ಅಥವಾ ಬಿಕ್ಕಟ್ಟು ಉಲ್ಭಣಗೊಳ್ಳಲು ವೇದಿಕೆಯಾಗುತ್ತಾ ಎನ್ನುವ ಅನುಮಾನ ಕೂಡ ಸೃಷ್ಟಿಯಾಗಿದೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಪರ್ಯಾಯ ಸಭೆ: ಅಫಜಲಪೂರದಲ್ಲಿ ರಾಯಣ್ಣ ಸಮಾವೇಶ

ಬ್ರಿಗೇಡ್ ಮೂಲಕ ಬಂಡಾಯ ಸಾರಿರುವ ನಾಯಕ ಈಶ್ವರಪ್ಪ, ಕಾರ್ಯಕಾರಿಣಿ ಸಮಾರೋಪದ ದಿನವೇ ಇದೇ ಕಲಬುರಗಿ ಜಿಲ್ಲೆಯ ಅಫಜಲಪೂರದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ಏರ್ಪಡಿಸಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಗೆ ಪರ್ಯಾಯದಂತಿರುವ ಈ ಬ್ರಿಗೇಡ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಈಶ್ವರಪ್ಪ, ರಾಜ್ಯ ಕಾರ್ಯ ಕಾರಿಣಿಯಲ್ಲಿ ಪಾಲ್ಗೊಳ್ಳೋದು ಅನುಮಾನ. ಈಶ್ವರಪ್ಪ ಮಾತ್ರವಲ್ಲ ಬಹಿರಂಗವಾಗಿ ಭಿನ್ನಮತದ ಹಾದಿ ತುಳಿದಿರುವ ಭಾನುಪ್ರಕಾಶ್ ಮತ್ತು ಟೀಂ ಹಾಗೂ ಇಂದಷ್ಟೇ ಭಿನ್ನರಾಗ ಶುರು ಮಾಡಿರುವ ವಿ ಸೋಮಣ್ಣ ಕೂಡ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳೋತ್ತಾರಾ ಎಂಬುದೇ ಸದ್ಯಕ್ಕಿರುವ ಪ್ರಶ್ನೆಯಾಗಿದೆ. ಆದ್ರೆ ಕಾರ್ಯಕಾರಿಣಿಯಲ್ಲಿ ಭಿನ್ನಮತ ಕುರಿತು ಚರ್ಚೆ ಅಗತ್ಯವಿಲ್ಲ , ಬ್ರಿಗೇಡ್ ಚಟುವಟಿಕೆಗಳನ್ನು ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದು, ಸೂಕ್ತ ಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಅಂತಾರೆ ಯಡಿಯೂರಪ್ಪ

ಬ್ರಿಗೇಡ್ ಬೆಂಬಲಿತರ ಮೇಲೆ ಕ್ರಮ ಕೈಗೊಳ್ಳುತ್ತಿರುವ ಬಿಜೆಪಿ ಕ್ರಮ ಖಂಡಿಸಿ ಬ್ರಿಗೇಡ್ ಬೆಂಬಲಿತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಒಟ್ನಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲು ಬಿಜೆಪಿ ಪಣ ತೊಟ್ಟಿದೆ .ಆದ್ರೆ ಪಕ್ಷದಲ್ಲಿನ ಗೊಂದಲ ನೋಡಿದ್ರೆ, ಇದು ಸಾಧ್ಯನಾ ಎಂಬ ಪ್ರಶ್ನೆಯೂ ಪಕ್ಷದ ಮುಖಂಡರಲ್ಲಿಯೇ ಕೇಳಿಬರುತ್ತಿದೆ. ಒಟ್ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಪಕ್ಷದ ಸಂಘಟನೆಗೆ ಪೂರಕವಾಗುತ್ತೋ ಇಲ್ಲವೇ ಪಕ್ಷದ ಆಂತರೀಕ ಭಿನ್ನಾಭಿಪ್ರಾಯ ಸ್ಪೋಟಕ್ಕೆ ವೇದಿಕೆಯಾಗುತ್ತೋ ಕಾದು ನೋಡಬೇಕಿದೆ.