ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಅಣ್ಣನ ಮಗಳು ದೀಪಾ ಜಯಕುಮಾರ್ ಅವರಿಗೆ ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಶಶಿಕಲಾ ನಟರಾಜನ್ ಅವರು ಎಐಎಡಿಎಂಕೆ ಪಕ್ಷದ ನೇತೃತ್ವ ವಹಿಸಿಕೊಂಡ ಪರಿಯು ಅನೇಕರ ಹುಬ್ಬೇರಿಸಿದೆ. ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಅಣ್ಣನ ಮಗಳು ದೀಪಾ ಜಯಕುಮಾರ್ ಅವರಿಗೆ ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಯಲಲಿತಾ ಅವರು ತಮ್ಮ ಆಸ್ತಿಪಾಸ್ತಿಯ ಹಂಚಿಕೆ ಬಗ್ಗೆ ಉಯಿಲು ಬರೆದಿಟ್ಟಿದ್ದು, ಅದನ್ನು ಬಹಿರಂಗಪಡಿಸುವಂತೆ ದೀಪಾ ಆಗ್ರಹಿಸಿದ್ದಾರೆ. ಏಷ್ಯಾನೆಟ್ ನ್ಯೂಸಬಲ್'ನ ಪ್ರತಿನಿಧಿ ಪ್ರತಿಭಾ ರಾಮನ್ ದೂರವಾಣಿ ಮೂಲಕ ನಡೆಸಿದ ಸಂದರ್ಶನದಲ್ಲಿ ದೀಪಾ ಜಯಕುಮಾರ್ ಅವರು ಇನ್ನಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
