Asianet Suvarna News Asianet Suvarna News

'ಪರೀಕ್ಷೆ ಎದುರಿಸೋದು ಹೇಗೆ'? ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆದ ಪ್ರಧಾನಿ ಮೋದಿ!

ಜನರು ಮೋದಿಯವರನ್ನು ಪ್ರೀತಿಸುತ್ತಾರೆ. ಕಡುಬಡವರಿಗೂ ಕೂಡ ಮೋದಿಯವರ ಪ್ರಾಮಾಣಿಕತೆ ಮತ್ತು ನಿಯತ್ತು ಅರಿವಾಗಿದೆ. ಅನಕ್ಷರಸ್ಥರ ಬುದ್ಧಿಶಕ್ತಿಯು ಸಾಕ್ಷರರ ಅದಕ್ಷತೆಗಿಂತ ಹೆಚ್ಚು ಪರಿಣಾಮಕಾರಿ ಎಂಬುದು ಮೋದಿ ವಿಷಯದಲ್ಲೂ ಮತ್ತೊಮ್ಮೆ ಸಾಬೀತಾಗಿದೆ. ಕಳೆದ 5 ವರ್ಷದಲ್ಲಿ ಈ ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ.

Exam Warriors written by Prime Minister Narendra Modi for students
Author
Bengaluru, First Published Sep 17, 2019, 12:09 PM IST

ಲೆವೆಲ್‌-5 ನಾಯಕತ್ವವು ಪ್ರಾಮಾಣಿಕತೆ, ಸಮಗ್ರತೆ, ಬದ್ಧತೆ ಮತ್ತು ಉತ್ಸಾಹ, ನಿರ್ಧಾರ ತೆಗೆದುಕೊಳ್ಳುವಿಕೆ, ಉತ್ತರದಾಯಿತ್ವವನ್ನು ಸೂಚಿಸುತ್ತದೆ. ಅದರ ಜೊತೆಗೆ ಆತ ಒಬ್ಬ ಅತ್ಯುತ್ತಮ ಸಂವಹನಕಾರನಾಗಿರಬೇಕು, ಕ್ರಿಯಾಶಿಲನಾಗಿರಬೇಕು, ನಾವೀನ್ಯತೆ ಹೊಂದಿರಬೇಕು. ಈ ಎಲ್ಲಾ ಅಂಶಗಳನ್ನು ಪ್ರತಿನಿಧಿಸುವವ ಸ್ಫೂರ್ತಿದಾಯಕ ನಾಯಕ ಎಂದೆನಿಸಿಕೊಳ್ಳುತ್ತಾನೆ. ಈ ಎಲ್ಲಾ ಮಾನದಂಡಗಳ ಆಧಾರದಲ್ಲಿ ನರೇಂದ್ರ ಮೋದಿ ಒಬ್ಬ ಸಮರ್ಥ ನಾಯಕನಾಗಿ ಎದ್ದು ಕಾಣುತ್ತಾರೆ.

ಭ್ರಷ್ಟಾಚಾರದ ಕೆಸರು ಇಲ್ಲ

ಮೋದಿಯವರ ಪ್ರಾಮಾಣಿಕತೆ ಪ್ರಶ್ನಾತೀತ. ರಾಷ್ಟ್ರೀಯ ಹಿತಾಸಕ್ತಿಯೇ ಅವರ ಹಿತಾಸಕ್ತಿ. ಗುಜರಾತ್‌ಗೆ ಅವರು 12 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ಈ ಇಮೇಜ್‌ ಎಲ್ಲೆಡೆ ಪಸರಿಸಿತು. 2004ರಿಂದ 14ರವರೆಗೆ ನಾಯಕತ್ವದ ಕೊರತೆ, ಭ್ರಷ್ಟಾಚಾರ, ನೀತಿ ನಿರೂಪಣೆಯಲ್ಲಿ ಖಾಲಿತನವನ್ನು ನೋಡಿದ್ದ ಜನರಿಗೆ ಇದು ಭಿನ್ನವಾಗಿ ಕಾಣಿಸಿತು. ಹೀಗಾಗಿ ಜನರು ಮೋದಿಯವರನ್ನು ಪ್ರೀತಿಸುತ್ತಾರೆ.

ಮೋದಿ ಜನ್ಮದಿನ ಹಿನ್ನೆಲೆ ದಾಖಲೆಯ 700 ಅಡಿ ಉದ್ದದ ಕೇಕ್‌ ತಯಾರಿಕೆ!

ಕಡುಬಡವರಿಗೂ ಕೂಡ ಮೋದಿಯವರ ಪ್ರಾಮಾಣಿಕತೆ ಮತ್ತು ನಿಯತ್ತು ಅರಿವಾಗಿದೆ. ಅನಕ್ಷರಸ್ಥರ ಬುದ್ಧಿಶಕ್ತಿಯು ಸಾಕ್ಷರರ ಅದಕ್ಷತೆಗಿಂತ ಹೆಚ್ಚು ಪರಿಣಾಮಕಾರಿ ಎಂಬುದು ಸಾಕಷ್ಟುಸಲ ಸಾಬೀತಾಗಿರುವುದು ಎಲ್ಲರಿಗೂ ಗೊತ್ತು. ಕಳೆದ 5 ವರ್ಷದಲ್ಲಿ ಮೋದಿ ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ.

ಇತ್ತೀಚೆಗೆ ಕೊನೆಯ ಕ್ಷಣದಲ್ಲಿ ಇಸ್ರೋದ ಚಂದ್ರಯಾನ-2ಗೆ ಹಿನ್ನಡೆಯಾದಾಗ ಅಲ್ಲಿನ ವಿಜ್ಞಾನಿಗಳನ್ನು ಮೋದಿ ಸಂತೈಸಿದ ಪರಿ ಅವರ ಮಾನವೀಯ ಮುಖವನ್ನು ಅನಾವರಣ ಮಾಡಿತು. ಶ್ರೀಹರಿಕೋಟಾದಿಂದ ಹೊರಡುವ ಮುನ್ನ ಇಸ್ರೋದ ವಿಜ್ಞಾನಿ ಮತ್ತು ಎಂಜಿನಿಯರ್‌ಗಳನ್ನು ಅವರು ಮಾಡಿದ ಸ್ಫೂರ್ತಿದಾಯಕ ಭಾಷಣ ಅದ್ಭುತವಾಗಿತ್ತು.

2014ರಲ್ಲಿ ಅಧಿಕಾರಕ್ಕೆ ಬಂದ ವೇಳೆ ಸಂಸತ್ತಿನ ಮೆಟ್ಟಿಲುಗಳಿಗೆ ಹಾಗೂ ಸಂವಿಧಾನಕ್ಕೆ ತಲೆಬಾಗಿ ನಮಸ್ಕರಿಸಿದ್ದ ಮೋದಿ, ನಂತರ ತಮ್ಮ ಸರ್ಕಾರ ಬಡವರ, ದೀನ ದಲಿತರ, ಶೋಷಣೆಗೊಳಪಟ್ಟವರ ಮತ್ತು ಇಲ್ಲಿಯವರೆಗೆ ನಿರ್ಲಿಕ್ಷಿಸಲ್ಪಟ್ಟವರ ಪರವಾಗಿದೆ ಎಂದು ಘೋಷಿಸಿದ್ದರು. ಆಗ ಅವರು ಘೋಷಿಸಿದ್ದ ‘ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌’ಗೆ ಈ ವರ್ಷ ‘ಸಬ್‌ಕಾ ವಿಶ್ವಾಸ್‌ ’ಎಂಬುದನ್ನೂ ಸೇರಿಸಿದ್ದಾರೆ. ಈ ಘೋಷಣೆಗಳು ಅವರ ಹಿತಾಸಕ್ತಿ ಏನೆಂಬುದನ್ನು ಸ್ಪಷ್ಟಪಡಿಸುತ್ತವೆ.

#HappyBdayPMModi| ಮೋದಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ಜಶೋದಾ ಬೇನ್‌!

ಅವರು ಭಿನ್ನವಾಗಿ ಯೋಚಿಸುತ್ತಾರೆ, ಭಿನ್ನವಾಗಿ ಕೆಲಸ ಮಾಡುತ್ತಾರೆ. ಆಡಳಿತ ವರ್ಗದ ಸಹಕಾರ ಪಡೆಯಲು ಹಾಗೂ ಅಧಿಕಾರಿಗಳನ್ನು ಪ್ರೇರೇಪಿಸಲು 10 ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ನೀಲ ನಕ್ಷೆ ತಯಾರಿಸಲು ಅವರು 10 ಕಾರ‍್ಯದರ್ಶಿಗಳನ್ನು ಒಳಗೊಂಡ ಗುಂಪು ರಚಿಸಿದ್ದರು. ಈ ಗುಂಪುಗಳು ತಮ್ಮ ಯೋಜನೆಗಳನ್ನು ಅವರ ಮುಂದೆ ಪ್ರಸ್ತುತಪಡಿಸಿದ್ದವು. ಆಗ ನಿಮ್ಮ ನಿಮ್ಮ ಯೋಜನೆಗಳ ಗುರಿ ತಲುಪಲು ವೇಗವಾಗಿ ಕೆಲಸ ಮಾಡಿ ಎಂದು ಟಾರ್ಗೆಟ್‌ ನೀಡಿದ್ದ ಮೋದಿ, ಮುಂದಿನ ವರ್ಷ ಆ ಯೋಜನೆಗಳ ಪ್ರಗತಿಯ ಬಗ್ಗೆ ಮತ್ತೆ ವರದಿ ಕೇಳಿದ್ದರು.

ಅಪ್‌ಡೇಟೆಡ್‌ ಯೋಚನೆಗಳು

ಬಹುಶಃ ವಿದ್ಯಾರ್ಥಿಗಳು ಎದುರಿಸುವ ಪರೀಕ್ಷೆಗಳು ಮತ್ತು ಅದರ ಸವಾಲಿನ ಬಗ್ಗೆ ಹೇಳಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಪುಸ್ತಕ ಬರೆದ ಮೊಟ್ಟಮೊದಲ ಪ್ರಧಾನಿ ಇವರೇ ಇರಬೇಕು. ಅದಕ್ಕೆ ಅವರು ‘ಎಕ್ಸಾಂ ವಾರಿಯ​ರ್‍ಸ್’ ಎಂಬ ಹೆಸರಿಟ್ಟಿದ್ದಾರೆ. 2 ವರ್ಷದಲ್ಲಿ ಅವರು ಸುಮಾರು 10 ಕೋಟಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನುದ್ದೇಶಿಸಿ ಮಾತನಾಡಿದ್ದಾರೆ.

ಪ್ರಧಾನಿಗೆ 69ನೇ ಹುಟ್ಟುಹಬ್ಬದ ಸಂಭ್ರಮ: ಟ್ವಿಟರ್‌ನಲ್ಲಿ ಮೋದಿ ಟ್ರೆಂಡ್!

ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಪಬ್‌-ಜಿ ಬಗ್ಗೆ ಉಲ್ಲೇಖಿಸಿದ್ದಾರೆ. ಅದರರ್ಥ ಜಗತ್ತಲ್ಲಿ ಏನಾಗುತ್ತದೆ ಎಂಬ ಬಗ್ಗೆ ಅವರು ಅಪ್‌ಡೇಟ್‌ ಆಗುತ್ತಿರುತ್ತಾರೆ. ಸಾಮಾಜಿಕ ಮಾಧ್ಯಮಗಳ ಸಮರ್ಥ ಬಳಕೆ ಮತ್ತು ಅವುಗಳ ವಿಸ್ತಾರತೆಯನ್ನು ಅರ್ಥೈಸಿಕೊಂಡ ಹಾಗೂ ಸಮರ್ಥವಾಗಿ ಬಳಸಿಕೊಂಡ ಮೊದಲ ಪ್ರಧಾನಿಯೂ ಇವರೇ ಇರಬೇಕು. ಇದನ್ನು ಬರೀ ಪ್ರಚಾರಕ್ಕಾಗಿ ಬಳಸಿಕೊಳ್ಳದೆ ಯುವಜನತೆಯೊಂದಿಗೆ ತಕ್ಷಣದ ಸಂಪರ್ಕ ಸಾಧಿಸಲೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.

ಹೊಸ ಸರ್ಕಾರಕ್ಕೆ ಹೊಸ ಗುರಿ

ಮೋದಿ ಒಬ್ಬ ಶ್ರೇಷ್ಠ ಸಂವಹನಕಾರ. ಜನರೊಂದಿಗೆ ನೇರವಾಗಿ ಮಾತನಾಡುತ್ತಾರೆ ಮತ್ತು ಅವರೊಂದಿಗೆ ಬಂಧ ಸೃಷ್ಟಿಸಿಕೊಳ್ಳುತ್ತಾರೆ. ತಮ್ಮ ಮಾತಿನಲ್ಲೇ ಜನರಲ್ಲಿ ವಿಶ್ವಾಸ ತುಂಬುತ್ತಾರೆ. ಜನರೂ ಇವರ ಕರೆಗೆ ಕೈಜೋಡಿಸುತ್ತಾರೆ. ಗ್ಯಾಸ್‌ ಸಬ್ಸಿಡಿ, ಪ್ರಯಾಣ ರಿಯಾಯಿತಿ ಮುಂತಾದವಕ್ಕೆ ಜನರು ಬೆಂಬಲ ನೀಡಿದ್ದಾರೆ. ಸರಕು ಮತ್ತು ಸೇವಾ ತೆರಿಗೆ, ನೋಟು ಅಮಾನ್ಯೀಕರಣ, ಸರ್ಜಿಕಲ್‌ ಸ್ಟ್ರೈಕ್, ಬಾಲಾಕೋಟ್‌ ಏರ್‌ಸ್ಟ್ರೈಕ್ ತ್ರಿವಳಿ ತಲಾಖ್‌ ನಿಷೇಧ ಅವರ ನಿರ್ಣಾಯಕ ನಾಯಕತ್ವಕ್ಕೆ ಉದಾಹರಣೆಗಳು.

ಹೊಸ ಸಂಸತ್ತು, ಹೊಸ ರಾಜಪಥ: ಮೋದಿ ಸರ್ಕಾರದ ಪ್ಲಾನ್‌ ಏನು? ಈಗ ಹೇಗಿದೆ?

10% ಇಬಿಸಿ ಮೀಸಲಾತಿ, ಉಜ್ವಲಾ ಯೋಜನೆ, ಪ್ರಧಾನಮಂತ್ರಿ ಆವಾಸ್‌, ಎಲ್‌ಇಡಿ, ಮುದ್ರಾ, ಸ್ಕಿಲ್‌ ಇಂಡಿಯಾ, ಆಯುಷ್ಮಾನ್‌ ಭಾರತ, ಕಿಸಾನ್‌ ಸಮ್ಮಾನ್‌, ಸಣ್ಣ ವ್ಯಾಪಾರಿಗಳು ಮತ್ತು ರೈತರಿಗೆ ಪಿಂಚಣಿ, 9.5 ಕೋಟಿ ಶೌಚಾಲಯ ಮುಂತಾದವು ಬಡವರ್ಗದ ಸಬಲೀಕರಣಕ್ಕೆ ಮೋದಿ ಕೈಗೊಂಡ ಕಾರ‍್ಯಗಳಿಗೆ ಉದಾಹರಣೆ. ಒಕ್ಕೂಟ ವ್ಯವಸ್ಥೆಯಲ್ಲಿ ಅವರಿಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಅತ್ಯುತ್ತಮ ಉದಾಹರಣೆ ಜಿಎಸ್‌ಟಿ. ಜಿಎಸ್‌ಟಿ ಕುರಿತಾದ ಕಾನೂನಿನ ಪ್ರತಿ ಪದಗಳು, ನಿಯಮಗಳು ಮತ್ತು ಅದರ ದರಗಳೆಲ್ಲವೂ ಸರ್ವಾನುಮತದಿಂದ ಕೈಗೊಂಡ ನಿರ್ಧಾರಗಳಾಗಿವೆ.

ಅವರು ಎರಡನೇ ಅವಧಿಯ ಸರ್ಕಾರದಲ್ಲಿ ಹೊಸ ಗುರಿಯನ್ನು ಘೋಷಿಸಿದ್ದಾರೆ. ದೇಶದ ಆರ್ಥಿಕತೆಯನ್ನು 5 ಲಕ್ಷ ಕೋಟಿಗೆ ಎತ್ತರಿಸುವ ಕನಸು ಕಂಡಿದ್ದಾರೆ. ಪ್ರತಿ ಮನೆಗೂ ನೀರು ಸರಬರಾಜು ಮಾಡುವ ಭರವಸೆ ನೀಡಿದ್ದಾರೆ, ಅಗತ್ಯವಿರುವ ಸಮುದಾಯಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಮತ್ತು ಎಲ್ಲರೊಂದಿಗೆ ವಿಶ್ವಾಸ ಗಳಿಸುವ (ಸಬ್‌ಕಾ ವಿಶ್ವಾಸ್‌) ಮಾತುಗಳನ್ನಾಡಿದ್ದಾರೆ.

ಸಂಶೋಧನೆಗೆ ಪ್ರೋತ್ಸಾಹ

ಮೋದಿ ಸೃಜನಶೀಲ ಮತ್ತು ನಾವೀನ್ಯತೆ ಹೊಂದಿರುವ ವ್ಯಕ್ತಿ. ಭಾರತ ಅನ್ವೇಷಣೆಯಲ್ಲಿ ಹಿಂದುಳಿದಿದ್ದು, ಸಂಶೋಧನೆ ಮತ್ತು ಅನ್ವೇಷಣೆಗಳೇ ಭಾರತವನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯಬಲ್ಲವು ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿಯೇ ಸುಮಾರು 3000 ಶಾಲೆಗಳಲ್ಲಿ ಅಟಲ್‌ ಟೆಕ್ನಾಲಜಿ ಲ್ಯಾಬ್‌ ಆರಂಭಿಸಿದ್ದಾರೆ. ಅಲ್ಲಿ ರೊಬೋಟಿಕ್ಸ್‌, 3ಡಿ ಪ್ರಿಂಟಿಂಗ್‌ ಮತ್ತಿತರ ಅತ್ಯಾಧುನಿಕ ಸೌಲಭ್ಯಗಳಿವೆ. ವಿದ್ಯಾರ್ಥಿಗಳು ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಸಂಶೋಧನೆ ನಡೆಸಿ ಅದ್ಭುತವಾದ ಹೊಸ ಹೊಸ ಐಡಿಯಾಗಳನ್ನು ತರುತ್ತಿದ್ದಾರೆ.

ಈ ವಿಷಯದಲ್ಲಿ ನಡೆಯುವ ಒಲಿಂಪಿಯಾಡ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗಾಗಿ ‘ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌’ ಆರಂಭಿಸಿ, ವಿದ್ಯಾರ್ಥಿಗಳು ನಿರ್ದಿಷ್ಟಸಮಸ್ಯೆಗಳು ಮತ್ತು ಅದರಿಂದ ಹೊರಬರಲು ಡಿಜಿಟಲ್‌ ಮತ್ತು ಹಾರ್ಡ್‌ವೇರ್‌ ಮಾದರಿಯ ಪರಿಹಾರ ಮಾರ್ಗ ಕಂಡುಕೊಳ್ಳಲು ವೇದಿಕೆ ಕಲ್ಪಿಸಿದ್ದಾರೆ.

ಕೊನೆಯ ಹಂತದಲ್ಲಿ 25 ಕೇಂದ್ರಗಳಲ್ಲಿ 10,000 ವಿದ್ಯಾರ್ಥಿಗಳು 36 ಗಂಟೆ ಸತತವಾಗಿ ಕಾರ‍್ಯನಿರ್ವಹಿಸುತ್ತಾರೆ. ಪ್ರತಿ ವರ್ಷ ಮಧ್ಯರಾತ್ರಿ ಈ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಹನ ನಡೆಸಿ ಅವರಲ್ಲಿ ಸ್ಫೂರ್ತಿ ತುಂಬುತ್ತಾರೆ.

ಹಲವಾರು ಐಐಟಿ/ಎನ್‌ಐಟಿ ಕೇಂದ್ರಗಳಲ್ಲಿ ಅವರು ‘ಅಟಲ್‌ ಇನ್‌ಕ್ಯುಬೇಶನ್‌ ಸೆಂಟರ್‌’ ಆರಂಭಿಸುವ ಭರವಸೆ ನೀಡಿದ್ದಾರೆ. ಈ ಬಜೆಟ್‌ನಲ್ಲಿ ‘ನ್ಯಾಷನಲ್‌ ರೀಸಚ್‌ರ್‍ ಫಂಡ್‌’ ಆರಂಭಿಸುವುದಾಗಿ ಹೇಳಿದ್ದಾರೆ. ಸಂಶೋಧನೆಗಳಿಗೆ ನೆರವಾಗಲು ‘ಪ್ರಧಾನಮಂತ್ರಿ ವಿದ್ಯಾರ್ಥಿವೇತನ’ ಮಂಜೂರು ಮಾಡಿದ್ದಾರೆ. ನಿಯಮಿತವಾಗಿ ಸ್ಟಾರ್ಟಪ್‌ಗಳೊಂದಿಗೆ ಸಂವಾದ ಮಾಡುತ್ತಾರೆ. ಮತ್ತು ಹೊಸ ಹೊಸ ಐಡಿಯಾಗಳೊಂದಿಗೆ ಯುವ ಜನರನ್ನು ಭೇಟಿ ಮಾಡುತ್ತಾರೆ.

- ಪ್ರಕಾಶ್ ಜಾವಡೇಕರ್

ಕೇಂದ್ರ ಪರಿಸರ ಸಚಿವ 

Follow Us:
Download App:
  • android
  • ios