ಒದು ಬರಹ ಗೊತ್ತಿಲ್ಲದವರಿಗೆ ಅಕ್ಷರ ಕಲಿಸುವುದೇ ಇದರ ಉದ್ದೇಶ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು, 95 ಸಾವಿರದ 665 ಜನರು ಈಗಾಗಲೇ ಕಲಿಕೆಯನ್ನು ಪಡೆದುಕೊಂಡಿದ್ದು, ಜಿಲ್ಲೆಯ 586 ಕೇಂದ್ರಗಳಲ್ಲಿ ಕಲಿಕೆ ಗುಣಮಟ್ಟ ಬಗ್ಗೆ ಮೌಲ್ಯಮಾಪನ ಪರೀಕ್ಷೆ ನಡೀತಿತ್ತು. ಈ ವೇಳೆ ಯೋಜನೆಯಡಿಯಲ್ಲಿ ಕಲಿತವರು ಬಿಟ್ಟು ಮಕ್ಕಳ ಕೈಯಲ್ಲಿ ಎಕ್ಸಾಂ ಬರೆಸಿ ಭಾರೀ ಗೋಲ್ ಮಾಲ್ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ(ಮಾ.20): ಅದು ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಕಾರ್ಯಕ್ರಮ. ಕೇಂದ್ರ, ರಾಜ್ಯ ಸರ್ಕಾರಗಳ ಮಹತ್ವಕಾಂಕ್ಷೆ ಯೋಜನೆ. ಈ ಯೋಜನೆಯಡಿಯಲ್ಲಿ 95 ಸಾವಿರಕ್ಕೂ ಹೆಚ್ಚು ಅನಕ್ಷರಸ್ಥರು ಅಕ್ಷರ ಕಲಿತಿದ್ದರು. ಆದರೆ ಮೌಲ್ಯಮಾಪನ ಪರೀಕ್ಷೆಗೆ ಹಾಜರಾಗಿದ್ದು ಅಕ್ಷರಸ್ಥರು. ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅರೇ ಎಲ್ಲಪ್ಪಾ ಅಂತೀರಾ ಈ ಸ್ಟೋರಿ ನೋಡಿ.
ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ವಯಸ್ಕರ ಶಿಕ್ಷಣ ಇಲಾಖೆಯ ಸಾಕ್ಷರ ಭಾರತ ಕಾರ್ಯಕ್ರಮ ಕೂಡ ಒಂದು. ಒದು ಬರಹ ಗೊತ್ತಿಲ್ಲದವರಿಗೆ ಅಕ್ಷರ ಕಲಿಸುವುದೇ ಇದರ ಉದ್ದೇಶ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು, 95 ಸಾವಿರದ 665 ಜನರು ಈಗಾಗಲೇ ಕಲಿಕೆಯನ್ನು ಪಡೆದುಕೊಂಡಿದ್ದು, ಜಿಲ್ಲೆಯ 586 ಕೇಂದ್ರಗಳಲ್ಲಿ ಕಲಿಕೆ ಗುಣಮಟ್ಟ ಬಗ್ಗೆ ಮೌಲ್ಯಮಾಪನ ಪರೀಕ್ಷೆ ನಡೀತಿತ್ತು. ಈ ವೇಳೆ ಯೋಜನೆಯಡಿಯಲ್ಲಿ ಕಲಿತವರು ಬಿಟ್ಟು ಮಕ್ಕಳ ಕೈಯಲ್ಲಿ ಎಕ್ಸಾಂ ಬರೆಸಿ ಭಾರೀ ಗೋಲ್ ಮಾಲ್ ನಡೆಸಿದ್ದಾರೆ. ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಲ್ಲಿ ಅಕ್ರಮ ನಡೆದಿರೋದು ಬೆಳಕಿಗೆ ಬಂದಿದೆ.
ಅಕ್ರಮದ ಬಗ್ಗೆ ಬೆನ್ನತ್ತಿ ಸುವರ್ಣ ನ್ಯೂಸ್ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಶಾಲೆಗೆ ತೆರಳಿದಾಗ ಹೆಡ್ ಮಾಸ್ಟರ್ ಸ್ಥಳದಿಂದ ಪೇರಿ ಕಿತ್ತರು, ವಿದ್ಯಾರ್ಥಿಗಳನ್ನು ಕೂಡ ಪರಾರಿ ಮಾಡಿಸಿದರು. ಬಳಿಕ ನಾವು ಹಾರೋಬಂಡೆ ಶಾಲೆಗೆ ತೆರಳಿದಾಗ ಮಕ್ಕಳೇ ಪರೀಕ್ಷೆ ಬರೆಯುತ್ತಿದ್ದರು. ನಮ್ಮ ಕ್ಯಾಮೆರಾ ನೋಡಿದ ಮಕ್ಕಳು ಓಡಿ ಹೋದ್ರೆ ಅಲ್ಲಿದ್ದ ಶಿಕ್ಷಕರು ತಬ್ಬಿಬ್ಬಾದರು. ಇದು ಯಾವ ಪರೀಕ್ಷೆ ಸರ್ ಅಂತಾ ಕೇಳಿದ್ರೆ, ನನಗೆ ಗೊತ್ತಿಲ್ಲಾ , ಬಂದವರಿಗೆಲ್ಲಾ ಪ್ರಶ್ನೆಪತ್ರಿಕೆ ಕೊಡುತ್ತಿದ್ದೇನೆ ಅಂತಾರೆ.
ಮಕ್ಕಳಷ್ಟೆ ಎಕ್ಸಾಂ ಬರಿತಿರಲಿಲ್ಲ. ಅವರ ಜೊತೆ ಮಹಿಳೆಯೊಬ್ಬಳು ಪರೀಕ್ಷೆ ಬರೆಯುತ್ತಿದ್ಲು. ಆಕೆ ಹೆಸರು ಶೈಲಜಾ ಆದ್ರೆ ಅವಳು ನಾಗಮ್ಮ ಎಂಬ ಹೆಸರಿನಲ್ಲಿ ಎಕ್ಸಾಂ ಬರೆಯುತ್ತಿದ್ಲು. ಬಹುತೇಖ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳನ್ನೆ ಕೂರಿಸಿ ಪರೀಕ್ಷೆ ಬರೆಸಿದ್ದಾರೆ. ಸರ್ಕಾರದ ಹಣವನ್ನು ತಿಂದು ಸರ್ಕಾರಕ್ಕೆ ಅನಕ್ಷರಸ್ಥರ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ.
