‘ಶಾಸಕಗೆ ಹುಚ್ಚುನಾಯಿಯಂತೆ ಹೊಡೆಯಿರಿ’: ಮಾಜಿ ಶಾಸಕರ ವಿವಾದಿತ ಹೇಳಿಕೆ

EX-MLA K Venkatesh Controversial Statement
Highlights

ನೂತನ ಶಾಸಕರು ದಬ್ಬಾಳಿಕೆ ಮಾಡುವುದು, ಸೇಡು ತೀರಿಸುಕೊಳ್ಳುವುದು ಮಾಡಿದರೆ, ಹಳ್ಳಿಗಳಲ್ಲಿ ಹುಚ್ಚುನಾಯಿಗಳನ್ನು ಅಟ್ಟಾಡಿಸಿಕೊಂಡು ಹೊಡೆಯುವ ಹಾಗೆ ಹೊಡೆಯಿರಿ ಎಂದು ಕ್ಷೇತ್ರದ ಮಾಜಿ ಶಾಸಕ ಕೆ.ವೆಂಕಟೇಶ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಪಿರಿಯಾಪಟ್ಟಣ: ನೂತನ ಶಾಸಕರು ದಬ್ಬಾಳಿಕೆ ಮಾಡುವುದು, ಸೇಡು ತೀರಿಸುಕೊಳ್ಳುವುದು ಮಾಡಿದರೆ, ಹಳ್ಳಿಗಳಲ್ಲಿ ಹುಚ್ಚುನಾಯಿಗಳನ್ನು ಅಟ್ಟಾಡಿಸಿಕೊಂಡು ಹೊಡೆಯುವ ಹಾಗೆ ಹೊಡೆಯಿರಿ ಎಂದು ಕ್ಷೇತ್ರದ ಮಾಜಿ ಶಾಸಕ ಕೆ.ವೆಂಕಟೇಶ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಪಟ್ಟಣದ ಮಹಾಲಕ್ಷ್ಮೇ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿ, ಶಾಸಕ ಕೆ.ಮಹದೇವ್‌ ಅವರ ಒಳ್ಳೆಯ ಕೆಲಸಗಳಿಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ, ಆದರೆ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ನಾನು ಸಹಿಸುವುದಿಲ್ಲ ಎಂದರು. 

ಶಾಸಕ ಕೆ. ಮಹದೇವ್‌ ಹಾಗೂ ನಾನು ಒಂದೇ ಪಕ್ಷದಲ್ಲಿ ಇದ್ದವರು, ನಾನೇ ಆವರನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷನಾಗಿ ಮಾಡಿದ್ದೆ. ಆತನ ಜೊತೆ ಇರುವವರು ಮೀಟರ್‌ ಬಡ್ಡಿ ದಂಧೆಯವರು, ಜೂಜುಕೋರರು, ಅಕ್ರಮವಾಗಿ ಲಾಟರಿ ಮಾರುವವರು, ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುವವರು, ಪುಂಡರು ಪೋಕರಿಗಳು ಇವರನ್ನು ಹದ್ದುಬಸ್ತಿನಲ್ಲಿಡದಿದ್ದರೆ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

loader