ಸವದತ್ತಿ ಮಾಜಿ ಶಾಸಕ ವಿಶ್ವನಾಥ್ ಮಾಮನಿ ನಿಧನ! ಅನ್ನನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿಶ್ವನಾಥ್! ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದ ವಿಶ್ವನಾತರ್ತ ಮಾಮನಿ! ಇಂದು ಸಂಜೆ 6 ಗಂಟೆಗೆ ಸವದತ್ತಿಯಲ್ಲಿ ಅಂತ್ಯಕ್ರಿಯೆ

ಸವದತ್ತಿ(ಅ.5): ಮಾಜಿ ಶಾಸಕ ವಿಶ್ವನಾಥ(ರಾಜಣ್ಣ) ಮಾಮನಿ ಇಂದು ವಿಧಿವಶರಾಗಿದ್ದಾರೆ. ಅನ್ನನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿಶ್ವನಾಥ್ ಮಾಮನಿ ಹುಬ್ಬಳ್ಳಿಯಲ್ಲಿ ಇಂದು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2004 ರಲ್ಲಿ ಸವದತ್ತಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ವಿಶ್ವನಾಥ್, ತಮ್ಮ ಸೌಮ್ಯ ಸ್ವಭಾವದಿಂದಲೇ ಜನರ ಮನ ಗೆದ್ದವರು. ಸವದತ್ತಿ ಪುರಸಭೆಯ ಸದಸ್ಯರಾಗಿಯೂ ವಿಶ್ವನಾಥ್ ಸೇವೆ ಸಲ್ಲಿಸಿದ್ದರು.

ವಿಶ್ವನಾಥ ಅವರ ಫುತ್ರ ಮಲ್ಲಿಕಾರ್ಜುನ ಅವರು 2015 ರಲ್ಲಿ ಇಂಡಿಯನ್ ರೆವಿನ್ಯೂ ಸರ್ವಿಸ್ (ಐಆರ್ ಎಸ್) ಹುದ್ದೆಗೆ ಆಯ್ಕೆಯಾಗಿದ್ದು ಸದ್ಯ ಮುಂಬಯಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಪುತ್ರಿಯೊಬ್ಬಳು ವಿದೇಶದಲ್ಲಿ ಡೆಂಟಲ್ ವೈದ್ಯರಾಗಿದ್ದಾರೆ.

ಇನ್ನು ವಿಶ್ವನಾಥ್ ಮಾಮನಿ ಅವರ ಅಂತ್ಯಕ್ರಿಯೆ ಇಂದು ಸಂಜೆ 6 ಗಂಟೆಗೆ ಸವದತ್ತಿಯಲ್ಲಿ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.