ಪಕ್ಷದ ‘75 ವರ್ಷಗಳ ಮಾನದಂಡ’ದನ್ವಯ, ಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಬೆನ್ ಹೇಳಿದ್ದಾರೆ.

ಅಹಮದಾಬಾದ್(ಅ.10): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಗುಜರಾತ್ ಮಾಜಿ ಸಿಎಂ ಆನಂದಿಬೆನ್ , ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಪಕ್ಷದ ‘75 ವರ್ಷಗಳ ಮಾನದಂಡ’ದನ್ವಯ, ಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಬೆನ್ ಹೇಳಿದ್ದಾರೆ.

2014ರ ಲೋಕಸಭೆ ಚುನಾವಣೆ ಬಳಿಕ, ಗುಜರಾತ್ ಸಿಎಂ ಆಗಿದ್ದ ಮೋದಿ ಪ್ರಧಾನಿ ಸ್ಥಾನಕ್ಕೆ ಏರಿದ್ದರು.ಈ ವೇಳೆ ಆನಂದಿಬೆನ್ ಮೋದಿ ಸ್ಥಾನ ತುಂಬಿದ್ದರು.

ಆದರೆ ಕಳೆದ ವರ್ಷ ಅವರನ್ನು ಬದಲಾಯಿಸಿ ವಿಜಯ್ ರೂಪಾನಿ ಅವರನ್ನು ಗುಜರಾತ್ ಸಿಎಂ ಆಗಿ ನೇಮಿಸಲಾಗಿತ್ತು