ರಾಜ್ಯದಲ್ಲಿ ಸಿಎಂ ಕುರ್ಚಿ ಅಲುಗಾಡುತ್ತಿದ್ರೆ, ಅತ್ತ ವಿದೇಶದಲ್ಲಿ ಸಿದ್ದು ರಿಲ್ಯಾಕ್ಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Sep 2018, 6:07 PM IST
Ex CM Siddaramaiah relaxed mood In Thames River at London
Highlights

ಹಲವು ವರ್ಷಗಳ ರಾಜಕೀಯ ತೊಳಲಾಟಗಳಿಂದ ಬಳಲಿರೋ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶದಲ್ಲಿ  ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. 

ಬೆಂಗಳೂರು, (ಸೆ.14):  ಹಲವು ವರ್ಷಗಳ ರಾಜಕೀಯ ತೊಳಲಾಟಗಳಿಂದ ಬಳಲಿರೋ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶದಲ್ಲಿ  ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. 

ಯುರೋಪ್ ಪ್ರವಾಸದಲ್ಲಿರುವ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಲಂಡನ್​ನ ಥೇಮ್ಸ್ ನದಿ ದಡದಲ್ಲಿ  ವಾಯುವಿಹಾರ ಮಾಡಿ ರಿಫ್ರೇಶ್ ಆಗಿದ್ದಾರೆ. ಹಾಗೂ ಲಂಡನ್​ನ ಜೇಮ್ಸ್ ಪಾರ್ಕ್​ನಲ್ಲಿರೋ ಬಸವಣ್ಣನ ಪುತ್ಥಳಿ ಎದುರು ಸಿದ್ದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಆದರೆ, ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ತೆರಳಿದ ದಿನದಿಂದ ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಸಿದ್ದರಾಮಯ್ಯನವರ ಪಾಳಯದಲ್ಲಿ ಗುರುತಿಸಿಕೊಂಡಿರುವ ನಾಯಕರುಗಳೇ ಸಮ್ಮಿಶ್ರ ಸರ್ಕಾರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದು, ಸರ್ಕಾರ ಅಲುಗಾಡುತ್ತಿದೆ. ಇದ್ರಿಂದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಸಿದ್ದು ಮೇಲೆ ಗರಂ ಆಗಿದ್ದಾರೆ. 

loader