ಮಹಾರಾಷ್ಟ್ರ ಮಾಜಿ ಸಿ.ಎಂ ಅಶೋಕ ಚವಾಣ್ ಮೇಲೆ ಕಪ್ಪು ಮಸಿ ಎರೆಚಿರುವ ಘಟನೆ ನಾಗಪುರ್ ಹಸನಾಭಾಗದಲ್ಲಿ ನಡೆದಿದೆ.
ಮಹಾರಾಷ್ಟ್ರ(ಫೆ.12): ಮಹಾರಾಷ್ಟ್ರ ಮಾಜಿ ಸಿ.ಎಂ ಅಶೋಕ ಚವಾಣ್ ಮೇಲೆ ಕಪ್ಪು ಮಸಿ ಎರೆಚಿರುವ ಘಟನೆ ನಾಗಪುರ್ ಹಸನಾಭಾಗದಲ್ಲಿ ನಡೆದಿದೆ.
ನಿನ್ನೆ ನಗರಸಭೆ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ರ್ಯಾಲಿಯ ವೇಳೆ ಅಶೋಕ್ ಚವಾಣ್ ಮುಖದ ಮೇಲೆ ಕಪ್ಪು ಮಸಿಯನ್ನ ಹಾಕಿ ವಿರೋಧವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಅಶೋಕ್ ಚವಾಣ್ ಮೇಲೆ ಮಸಿಯನ್ನ ಹಾಕಿದ್ದು ಲಾಲಿತ್ ಬೆಗಲ್ ಎಂಬುವವರು ಎಂದು ಗುರುತಿಸಲಾಗಿದೆ.
ಮಸಿ ದಾಳಿಯ ನಂತರ ಮಾತನಾಡಿದ ಮಾಜಿ ಸಿ ಎಂ ಚವಾಣ್ ಇದು RSS ನ ಕುತಂತ್ರ ನನ್ನ ಮೇಲೆ ಮಸಿ ದಾಳಿ ಮಾಡಿರುವುದರಲ್ಲಿ RSS ನವರ ಕೈವಾಡ ಇದೆ ಆರೋಪಿಸಿದ್ದಾರೆ.
