ನಿಷೇಧಿತ ನಶೆಯ ಮಾತ್ರೆಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಗ್ ಬಾಸ್ ಸ್ಪರ್ಧಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಮುಂಬೈ : ಮಾಜಿ ಬಿಗ್ ಬಾಸ್ ಹಾಗೂ ನಟನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಜಾಜ್ ಎಂಬುವವರನ್ನು ನಿಷೇಧಿತ ನಶೆಯ ಮಾತ್ರೆಗಳನ್ನು ಅಕ್ರಮವಾಗಿ ಹೊಂದಿದ್ದರಿಂದ ಬಂಧನಕ್ಕೊಳಪಡಿಸಲಾಗಿದೆ. 

ಮುಂಬೈನ ಬೆಲಾಪುರ್ ನಲ್ಲಿರುವ ಹೋಟೆಲ್ ರೂಮ್ನಲ್ಲಿ ಬಂಧಿಸಲಾಗಿದ್ದು ಮಂಗಳವಾರ ಕೋರ್ಟ್ ಗೆ ಹಾಜರುಪಡಿಸಲಾಗಿದೆ. 

ಈ ಹಿಂದೆಯೂ ಒಮ್ಮೆ ಅಜಾಜ್ ಖಾನ್ ವಿರುದ್ಧ ಮಹಿಳೆಯೋರ್ವರು ಪ್ರಕರಣ ದಾಖಲು ಮಾಡಿದ್ದರು. ಅಸಹ್ಯವಾಗಿ ಸಂದೇಶ ಕಳಿಸಿದ್ದರೆಂದು ನೀಡಿದ ದೂರಿನ ಆಧಾರದಲ್ಲಿ ಎಫ್ ಐ ಆರ್ ದಾಖಲಿಸಲಾಗಿತ್ತು. 

ಸಲ್ಮಾನ್ ಖಾನ್ ನಡೆಸಿ ಕೊಡುವ ಬಿಗ್ ಬಾಸ್ ಕಾರ್ಯಕ್ರಮದ 7ನೇ ಆವೃತ್ತಿಯಲ್ಲಿ ಅಜಾಜ್ ಖಾನ್ ಪಾಲ್ಗೊಂಡಿದ್ದರು. ಅಲ್ಲದೇ ಕೆಲ ಬಾಲಿವುಡ್ ಚಿತ್ರಗಳಲ್ಲಿಯೂ ಕೂಡ ಅಜಾಜ್ ನಟನೆ ಮಾಡಿದ್ದಾರೆ.