Asianet Suvarna News Asianet Suvarna News

ತಿವಾರಿ ಕೇಸ್: ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ಸಾಕ್ಷ್ಯ ನಾಶ..?

ಆಗಸ್ಟ್ 29ಕ್ಕೆ ಸಂಜಯ್ ನಗರದ ತಿವಾರಿ ನಿವಾಸಕ್ಕೆ,  ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಈ ವೇಳೆ ಇಲಾಖೆಗೆ ಸಂಬಂಧ ಪಟ್ಟ ಕೆಲ ದಾಖಲೆಗಳು ಹೊತ್ತೊಯ್ದಿದ್ದಾರೆ. ಈ ಸಂಬಂಧ ಆ.30 ರಂದೇ ಸಂಜಯ್ ನಗರ ಠಾಣೆಗೆ ಮತ್ತು ಆಹಾರ ಖಾತೆ ಸಚಿವ ಖಾದರ್‌ಗೂ ಅನುರಾಗ್ ಪೋಷಕರು ದೂರು ನೀಡಿದ್ದಾರೆ. ಆದ್ರೆ ಇದ್ರಿಂದ ಯಾವುದೇ ಪ್ರಯೋಜನವಾಗಿಲ್ಲ. ​

evidence allegedly tampered in anurag tiwari case

ಬೆಂಗಳೂರು(ಸೆ. 26): ಕರ್ನಾಟಕದಲ್ಲಿ ದಕ್ಷ ಅಧಿಖಾರಿಗಳಿಗೆ ಉಳಿಗಾಲ ಇಲ್ಲವಾ, ಅವ್ರ ಸಾವಿಗೆ ನ್ಯಾಯ ಸಿಗೋದೆ ಇಲ್ವಾ ಅನ್ನೋ ಪ್ರಶ್ನೆ ಮತ್ತೇ ತಲೆ ಎತ್ತಿದೆ. ಈಗಾಗಲೇ ಗಣಪತಿ ಸಾವಿನ ಸಾಕ್ಷ್ಯ ನಾಶ ಆಗಿದೆ. ಇದೀಗ ಅನುರಾಗ್ ತಿವಾರಿಯ ಸಾವಿನ ಸಾಕ್ಷ್ಯ ಕೂಡ ನಾಶವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ತಿವಾರಿ ಆಹಾರ ಇಲಾಖೆ ಹಗರಣ ಬಯಲಿಗೆ ತಂದಿದ್ದೇ ಸಾವಿಗೆ ಕಾರಣವಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳಿಂದಲೇ ಸಾಕ್ಷ್ಯ ನಾಶ ಆಗಿದ್ಯ ಅನ್ನೋ ಅನುಮಾನ ಮೂಡಿದೆ.

ಆಗಸ್ಟ್ 29ಕ್ಕೆ ಸಂಜಯ್ ನಗರದ ತಿವಾರಿ ನಿವಾಸಕ್ಕೆ,  ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಈ ವೇಳೆ ಇಲಾಖೆಗೆ ಸಂಬಂಧ ಪಟ್ಟ ಕೆಲ ದಾಖಲೆಗಳು ಹೊತ್ತೊಯ್ದಿದ್ದಾರೆ. ಈ ಸಂಬಂಧ ಆ.30 ರಂದೇ ಸಂಜಯ್ ನಗರ ಠಾಣೆಗೆ ಮತ್ತು ಆಹಾರ ಖಾತೆ ಸಚಿವ ಖಾದರ್‌ಗೂ ಅನುರಾಗ್ ಪೋಷಕರು ದೂರು ನೀಡಿದ್ದಾರೆ. ಆದ್ರೆ ಇದ್ರಿಂದ ಯಾವುದೇ ಪ್ರಯೋಜನವಾಗಿಲ್ಲ.

ಇನ್ನು, ಆಹಾರ ಇಲಾಖೆ ಅಧಿಕಾರಿಗಳು ಸಿಬಿಐ ತನಿಖೆಗೆ ಸಹಕಾರ ನೀಡದಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Follow Us:
Download App:
  • android
  • ios