ನವಜೋತ್ ಸಿದ್ಧು ಮತ್ತು ಕಪಿಲ್ ನಡುವೆ ಬಿರುಕು ಮೂಡಲು ಕಾರಣಳಾದಳಾ ಈ ಮಹಿಳೆ?'
ಕಾಮಿಡಿಯನ್ ಕಪಿಲ್ ಶರ್ಮಾ ಹಾಗೂ ಮಾಜಿ ಕ್ರಿಕೆಟರ್, ನಾಯಕ ನವಜೋತ್ ಸಿಂಗ್ ಸಿದ್ಧು, ಇಬ್ಬರ ನಡುವಿನ ಭಾಂದವ್ಯದ ಕುರಿತಾಗಿ ತಿಳಿಯದವರಿಲ್ಲ. ನವಜೋತ್ ಬೆಂಬಲ ಯಾವತ್ತೂ ಕಪಿಲ್'ನೊಂದಿಗಿರುತ್ತದೆ. ಪರಿಸ್ಥಿತಿ ಅದೆಷ್ಟೇ ಕೆಟ್ಟದಾಗಿದ್ದರೂ ಸಿದ್ಧು ಯಾವತ್ತೂ ಕಪಿಲ್ ಕೈ ಬಿಟ್ಟವರಲ್ಲ. ಆದರೆ ಇತ್ತೀಚೆಗಷ್ಟೇ ಕಪಿಲ್ ಮಾಡಿದ ಅವಾಂತರದಿಂದಾಗಿ ನವಜೋತ್'ಗೆ ಬಹಳಷ್ಟು ನೋವಾಗಿದ್ದು, ಸಿಟ್ಟುಗೊಂಡಿದ್ದಾರೆ. ಇಬ್ಬರ ನಡುವೆ ಮೂಡಿರುವ ಈ ಬಿರುಕಿನ ವಿಚಾರದಲ್ಲಿ ಮಹಿಳೆಯೊಬ್ಬರ ಹೆಸರೂ ಕೇಳಿ ಬಂದಿದೆ. ಅಷ್ಟಕ್ಕೂ ಆ ಮಹಿಳೆ ಯಾರು? ಆಗಿದ್ದೇನು ಅಂತೀರಾ? ಇಲ್ಲಿದೆ ನೋಡಿ ವಿವರ
ಮುಂಬೈ(ಆ.16): ಕಾಮಿಡಿಯನ್ ಕಪಿಲ್ ಶರ್ಮಾ ಹಾಗೂ ಮಾಜಿ ಕ್ರಿಕೆಟರ್, ನಾಯಕ ನವಜೋತ್ ಸಿಂಗ್ ಸಿದ್ಧು, ಇಬ್ಬರ ನಡುವಿನ ಭಾಂದವ್ಯದ ಕುರಿತಾಗಿ ತಿಳಿಯದವರಿಲ್ಲ. ನವಜೋತ್ ಬೆಂಬಲ ಯಾವತ್ತೂ ಕಪಿಲ್'ನೊಂದಿಗಿರುತ್ತದೆ. ಪರಿಸ್ಥಿತಿ ಅದೆಷ್ಟೇ ಕೆಟ್ಟದಾಗಿದ್ದರೂ ಸಿದ್ಧು ಯಾವತ್ತೂ ಕಪಿಲ್ ಕೈ ಬಿಟ್ಟವರಲ್ಲ. ಆದರೆ ಇತ್ತೀಚೆಗಷ್ಟೇ ಕಪಿಲ್ ಮಾಡಿದ ಅವಾಂತರದಿಂದಾಗಿ ನವಜೋತ್'ಗೆ ಬಹಳಷ್ಟು ನೋವಾಗಿದ್ದು, ಸಿಟ್ಟುಗೊಂಡಿದ್ದಾರೆ. ಇಬ್ಬರ ನಡುವೆ ಮೂಡಿರುವ ಈ ಬಿರುಕಿನ ವಿಚಾರದಲ್ಲಿ ಮಹಿಳೆಯೊಬ್ಬರ ಹೆಸರೂ ಕೇಳಿ ಬಂದಿದೆ. ಅಷ್ಟಕ್ಕೂ ಆ ಮಹಿಳೆ ಯಾರು? ಆಗಿದ್ದೇನು ಅಂತೀರಾ? ಇಲ್ಲಿದೆ ನೋಡಿ ವಿವರ
ಇತ್ತೀಚೆಗೆ ಕಪಿಲ್ ಹೆಸರು ತನ್ನ ಕೆಲಸಕ್ಕಿಂತಲೂ ಹೆಚ್ಚಾಗಿ ವಿವಾದಗಳಿಂದಲೇ ಫೇಮಸ್ ಆಗುತ್ತಿದೆ. ಇನ್ನು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸುದ್ದಿಯನ್ನು ಗಮನಿಸಿದರೆ ವಿಚಾರ ನವಜೋತ್ ಹಾಗೂ ಕಪಿಲ್ ನಡುವೆ ಮೂಡಿಸರುವ ಬಿರುಕಿನ ಕುರಿತಾಗಿ ಮಾಹಿತಿ ಸಿಗುತ್ತದೆ. ವಾಸ್ತವವಾಗಿ ಕಪಿಲ್ ಶರ್ಮಾ ಶೋನ ಎಪಿಸೋಡ್ ಒಂದರ ಶೂಟಿಂಗ್'ಗಾಗಿ ದಿನಾಂಕ ನಿಗದಿಯಾಗಿತ್ತು. ಆದರೆ ಶೂಟಿಂಗ್ ನಡೆಯುವ ದಿನದಂದೇ ನವಜೋತ್ ಸಿದ್ಧು ಆರೋಗ್ಯ ಹದಗೆಟ್ಟಿತ್ತು, ಹೀgAಗಿ ಅವರಿಗೆ ಶೂಟಿಂಗ್ ಸೆಟ್'ಗೆ ಬರಲಾಗಲಿಲ್ಲ, ಶೂಟಿಂಗ್ ನಿಲ್ಲಿಸಬೇಕಾಯಿತು.
ಇನ್ನು ನವಜೋತ್ ಸೀಟ್ ಖಾಲಿ ಇರಬಾರದೆಂದು ಯೋಚಿಸಿದ ಕಪಿಲ್ ಶರ್ಮಾ ಅರ್ಚನಾ ಪೂರನ್ ಸಿಂಗ್'ರನ್ನು ಕರೆದಿದ್ದಾರೆ. ಆದರೆ ಈ ವಿಚಾರ ತಿಳಿಯುತ್ತಿದ್ದಂತೆಯೇ ಸಿದ್ಧು ಕೋಪಗೊಂಡಿದ್ದಾರೆ. ಇದನ್ನರಿತ ಕಪಿಲ್ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಕೂಡಲೇ ಅರ್ಚನಾರಿಗೆ ಕರೆ ಮಾಡಿ ಶೂಟಿಂಗ್'ಗೆ ಬರದಂತೆ ಕೇಳಿಕೊಂಡಿದ್ದಾರೆ. ಆದರೆ ನಷ್ಟ ಮಾತ್ರ ಆಗಿದೆ.