ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಯೋಜನೆಗೆ ಅನುಮೋದನೆ ದೊರೆತಿದೆ.. ಈಗ ಕಾಂಗ್ರೆಸ್ ಸರ್ಕಾರ ಮುಂದುವರೆಸುತ್ತಿದೆ ಅಂತ ಸರ್ಕಾರದ ಪರವಾಗಿ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ರಮಾನಾಥರೈ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ,  ಬಿಜೆಪಿಯವರು ಎರಡು ತಲೆಯ ಹಾವಿನಂತೆ ಅಂತ ಸಚಿವ ರಮಾನಾಥ ರೈ ಗುಡುಗಿದ್ದಾರೆ.

ಬೆಂಗಳೂರು(ಡಿ.26): ಬಯಲು ಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಸಮಸ್ಯೆ ಪರಿಹರಿಸಲು ಸಿಎಂ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಪ್ರತಿಷ್ಠೆಗೆ ಸಭೆ ಬಲಿಯಾಗಿದ್ದು, ಎರಡೂ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪ ಮಾಡಿ ಸಭೆ ಅಂತ್ಯಗೊಳಿಸಿದ್ದಾರೆ. ಸರ್ಕಾರ ಮಾತ್ರ ಯೋಜನೆಯನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.

ಬಿಜೆಪಿಯವರು ಎರಡು ತಲೆಯ ಹಾವಿನಂತೆ!: ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಯೋಜನೆಗೆ ಅನುಮೋದನೆ ದೊರೆತಿದೆ.. ಈಗ ಕಾಂಗ್ರೆಸ್ ಸರ್ಕಾರ ಮುಂದುವರೆಸುತ್ತಿದೆ ಅಂತ ಸರ್ಕಾರದ ಪರವಾಗಿ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ರಮಾನಾಥರೈ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಬಿಜೆಪಿಯವರು ಎರಡು ತಲೆಯ ಹಾವಿನಂತೆ ಅಂತ ಸಚಿವ ರಮಾನಾಥ ರೈ ಗುಡುಗಿದ್ದಾರೆ.

ಈಗಾಗಲೇ ಯೋಜನೆ ಆರಂಭವಾಗಿ ಸಾಕಷ್ಟು ಕೆಲಸ ನಡೆದಿದೆ. ಸರ್ಕಾರ ಯೋಜನೆಯನ್ನು ಮುಂದುವರಿಸುವುದಾಗಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಯೋಜನೆಯಲ್ಲಿ ಸಾಕಷ್ಟು ಗೊಂದಲಗಳಿವೆ, ಸರ್ಕಾರ ಹೇಳುವಷ್ಟು ನೀರಿನ ಲಭ್ಯತೆ ಇಲ್ಲ ಅಂತ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.