ಬೆಂಗಳೂರು (ಸೆ.27): ಆರೆಸ್ಸೆಸ್ ಪ್ರಧಾನ ಕಚೇರಿ ಕೇಶವಕೃಪದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಜಿಜೆಪಿ ನಾಯಕ ಈಶ್ವರಪ್ಪರಿಗೆ ತೀವ್ರ ಮುಖಭಂಗವಾಗಿದೆ.

ಸಭೆಯಲ್ಲಿ ಹಿಂದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲು ಮುಂದಾದ ಈಶ್ವರಪ್ಪರಿಗೆ, ಆರೆಸ್ಸೆಸ್ ನಾಯಕರು ಈ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ.

ಹಿಂದ ಸಭೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಆರೆಸ್ಸೆಸ್ ನಾಯಕರು, ನಮ್ಮ ಬಳಿ ಈ ವಿಚಾರಗಳನ್ನು ತರಬೇಡಿ, ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ನಿಮ್ಮ ಅಸಮಾಧಾನವನ್ನು ಬಗೆಹರಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.

ಅಕ್ಟೋಬರ್ 3 ರಂದು ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಸಾಧ್ಯತೆಯಿದೆ ಎನ್ನಲಾಗಿದೆ.

ಸಭೆಯ ಬಳಿಕ ಕೇಶವಕೃಪದಿಂದ ಹೊರಬಂದ ಈಶ್ವರಪ್ಪ ಮುಖದಲ್ಲಿ ನಿರಾಶಾಭಾವ ಎದ್ದುಕಾಣುತ್ತಿತ್ತು. ಸಭೆ ಮುಗಿಸಿ ಹೊರಬಂದ ಈಶ್ವರಪ್ಪ ಕಾವೇರಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಕಾವೇರಿಯೂ ಬೇಡ ,ಕೃಷ್ಣನೂ ಬೇಡ, ನಮ್ದೆ ನಮಗಾಗಿದೆ ಎಂದು ಈಶ್ವರಪ್ಪ ಹೊರಟುಹೋಗಿದ್ದಾರೆ.