ಬಿಜೆಪಿಯತ್ತ ಮುಖ ಮಾಡುತ್ತಾರಾ ಅತೃಪ್ತರು..?

Eshwarappa invites Congress, JDS unhappy MLAs
Highlights

ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ನಿರಾಸೆಗೊಂಡಿರುವ ಶಾಸಕರು ಈಗಲಾದರೂ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಗೆ ಬರುವಂತೆ ಶಾಸಕ ಕೆ.ಎಸ್.ಈಶ್ವರಪ್ಪ ಅತೃ ಪ್ತರಿಗೆ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. 

ಶಿವಮೊಗ್ಗ: ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ನಿರಾಸೆಗೊಂಡಿರುವ ಶಾಸಕರು ಈಗಲಾದರೂ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಗೆ ಬರುವಂತೆ ಶಾಸಕ ಕೆ.ಎಸ್.ಈಶ್ವರಪ್ಪ ಅತೃ ಪ್ತರಿಗೆ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ 104 ವಿಧಾನಸಭಾ ಕ್ಷೇತ್ರ ಗಳಲ್ಲಿ ಗೆಲುವು ಸಾಧಿಸಿದ ಸಂದರ್ಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗ ಬೇಕೆಂದು ಅನೇಕ ಶಾಸಕರು ಬಿಜೆಪಿಯೊಂದಿಗೆ ಚರ್ಚಿಸಿದ್ದರು. ಅವರಲ್ಲಿ ಹಲವರಿಗೆ ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ನಿರಾಶೆಗೊಂಡಿದ್ದಾರೆ.

ಈಗಲಾದರೂ ಬೇಸರಗೊಂಡಿರುವವರು ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿದರು. ಸಚಿವ ಸಂಪುಟ ರಚನೆ ನಂತರ ಕಾಂಗ್ರೆಸ್ ಬೆತ್ತಲಾಗಿದೆ. ಕಾಂಗ್ರೆಸ್ ಶಾಸಕರೇ ಆ ಪಕ್ಷದ ಕುರಿತು ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರೇ ಕಾಂಗ್ರೆಸ್ ಪಕ್ಷವನ್ನು ಮಾರಲು ಹೊರಟಿದ್ದಾರೆ ಎಂದು ಆರೋಪಿಸು ತ್ತಿದ್ದಾರೆ. 

ಈಗಾಗಲೇ 22 ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತವಾಗಲಿದೆ. ಈಗಾಗಲೇ ಸಂಪುಟದಲ್ಲಿ ಸ್ಥಾನ ಸಿಗದ ಹಲವು ಶಾಸಕರು ತಮ್ಮ ನಿರ್ಧಾರವನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಹೇಳುತ್ತಿದ್ದು, ಅವರು ಬಿಜೆಪಿಗೆ ಬರಲಿ ಎಂದು ಆಹ್ವಾನವಿತ್ತರು.

loader