ಬೆಂಗಳೂರು (ಫೆ.11): ಬಿಜೆಪಿಯಲ್ಲಿ ಬ್ರಿಗೇಡ್ ಬಿಕ್ಕಟ್ಟು ನಿಲ್ಲುವಂತೆ ಕಾಣುತ್ತಿಲ್ಲ. ಬಿಎಸ್​​ವೈ ಮತ್ತು ಈಶ್ವರಪ್ಪ ಜಟಾಪಟಿ ಮುಂದುವರೆದಿದೆ. ಬ್ರಿಗೇಡ್ ತಾಕತ್ತು ತೋರಿಸುವೆ ಎಂದ ಈಶ್ವರಪ್ಪ ಗುಡುಗಿದ್ದಾರೆ.

ಬೆಂಗಳೂರು (ಫೆ.11): ಬಿಜೆಪಿಯಲ್ಲಿ ಬ್ರಿಗೇಡ್ ಬಿಕ್ಕಟ್ಟು ನಿಲ್ಲುವಂತೆ ಕಾಣುತ್ತಿಲ್ಲ. ಬಿಎಸ್​​ವೈ ಮತ್ತು ಈಶ್ವರಪ್ಪ ಜಟಾಪಟಿ ಮುಂದುವರೆದಿದೆ. ಬ್ರಿಗೇಡ್ ತಾಕತ್ತು ತೋರಿಸುವೆ ಎಂದ ಈಶ್ವರಪ್ಪ ಗುಡುಗಿದ್ದಾರೆ.

ಬ್ರಿಗೇಡ್ ಆರಂಭಿಸಿ ಏಳು ತಿಂಗಳಾಗಿದೆಯಷ್ಟೇ. 7 ತಿಂಗಳಿಗೆ ಹುಟ್ಟಿದವರಂತೆ ಮಾತಾಡ್ತಾರೆ ಎಂದು ಬಿಎಸ್​ವೈಗೆ ಈಶ್ವರಪ್ಪ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ಬ್ರಿಗೇಡ್ ನ ತಾಕತ್ತೇನು ಎಂದು ತೋರಿಸೋಣ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಸಮಿತಿ ರಚನೆ ಆಗಬೇಕು. ಮಾರ್ಚ್ 4 ರಂದು ಮತ್ತೊಮ್ಮೆ ಸಭೆ ನಡೆಸೋಣ ಎಂದು ಬ್ರಿಗೇಡ್ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಬ್ರಿಗೇಡ್ನಿರ್ಧಾರಗಳು

ಕೆ.ಎಸ್.ಈಶ್ವರಪ್ಪರಿಗೆ ಎಲ್ಲಾ ಹಂತದಲ್ಲಿ ಬೆಂಬಲಕ್ಕೆ ನಿಲ್ಲಲು ನಿರ್ಧಾರ

ಬಿಜೆಪಿಯ ಪದಾಧಿಕಾರಿಗಳ ಬದಲಾವಣೆ ಆಗುವ ತನಕ ಬ್ರಿಗೇಡ್ ಕಾರ್ಯಚಟುಟಿಕೆ ಜೀವಂತ

ವರಿಷ್ಟರು ಸೂಚಿಸಿದಂತೆ ಪದಾಧಿಕಾರಿಗಳ ಬದಲಾವಣೆಗೆ ಒತ್ತಾಯ ಮುಂದುವರೆಸಲು ತೀರ್ಮಾನ

ಸಾಮಾಜಿಕ ಚಟುವಟಿಕೆಗಳ ಮೂಲಕ ಬ್ರಿಗೇಡ್ ನ ಕ್ರಿಯಾಶೀಲತೆಯನ್ನು ಮುಂದುವರೆಸಲು ತೀರ್ಮಾನ

ಪ್ರತಿ ಜಿಲ್ಲೆಗಳಲ್ಲೂ ಸಮಿತಿ ರಚಿಸುವ ಮೂಲಕ ಪ್ರತ್ಯೇಕ ಅಸ್ತಿತ್ವವನ್ನು ಮುಂದುವರೆಸಿಕೊಂಡು ಹೋಗಲು ತೀರ್ಮಾನ

ವಿದ್ಯಾರ್ಥಿಗಳ ಸಮಾವೇಶ ಮಾಡುವುದರ ಮೂಲಕ ಬ್ರಿಗೇಡ್ ಬಲ ಪ್ರದರ್ಶನಕ್ಕೆ ಸಭೆಯಲ್ಲಿ ಸಹಮತ.