Asianet Suvarna News Asianet Suvarna News

ಜಯಾ ವಿಡಿಯೋ ಬಿಡುಗಡೆ ಮಾಡಬೇಕಾಗುತ್ತೆ ಹುಷಾರ್

ಜಯಾ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸುತ್ತಿರುವ ಶಶಿಕಲಾ ಅವರ ಎದುರಾಳಿ, ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಬಣಕ್ಕೆ ತಿರುಗೇಟು ನೀಡುವ ರೀತಿಯಲ್ಲಿ  ಫೇಸ್‌ಬುಕ್‌ನಲ್ಲಿ ದಿವಾಕರನ್ ಅವರು ಈ ಹೇಳಿಕೆಗಳನ್ನು ಬರೆದಿದ್ದರಾದರೂ, ಬಳಿಕ ಅಳಿಸಿ ಹಾಕಿದ್ದಾರೆ.

EPS Camp Forms Panel to Hold Talks With OPS Faction
  • Facebook
  • Twitter
  • Whatsapp

ಚೆನ್ನೈ(ಏ.21): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿರುವಾಗಲೇ, ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಕಳೆದ ಕೊನೆಯ ದಿನಗಳ ವಿಡಿಯೋ ಬಿಡುಗಡೆ ಮಾಡಬೇಕಾಗುತ್ತದೆ ಶಶಿಕಲಾ ನಟರಾಜನ್ ಬಂಧು ಜಯನಂದ ದಿವಾಕರನ್ ಎಂಬುವರು ಬೆದರಿಕೆಯೊಡ್ಡಿದ್ದಾರೆ.

ಜಯಲಲಿತಾ ಹಾಗೂ ಶಶಿಕಲಾ ನಡುವೆ ಯಾವ ರೀತಿಯ ಸಂಬಂಧವಿತ್ತು ಎಂಬುದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಜಯಾ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸುತ್ತಿರುವ ಶಶಿಕಲಾ ಅವರ ಎದುರಾಳಿ, ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಬಣಕ್ಕೆ ತಿರುಗೇಟು ನೀಡುವ ರೀತಿಯಲ್ಲಿ  ಫೇಸ್‌ಬುಕ್‌ನಲ್ಲಿ ದಿವಾಕರನ್ ಅವರು ಈ ಹೇಳಿಕೆಗಳನ್ನು ಬರೆದಿದ್ದರಾದರೂ, ಬಳಿಕ ಅಳಿಸಿ ಹಾಕಿದ್ದಾರೆ.

ಕೊಲೆಗಡುಕಿ ಎಂಬ ಟೀಕೆ ಕೇಳಿಬಂದರೂ ಜಯಲಲಿತಾ ಅವರ ಫೋಟೋವನ್ನು ಶಶಿಕಲಾ ಬಹಿರಂಗಪಡಿಸಲಿಲ್ಲ. ಜಯಾ ಅವರು ನಿಧನರಾಗುವವರೆಗೂ ಅವರನ್ನು ಶಕ್ತಿಶಾಲಿ ಸಿಂಹದಂತೆ ನೋಡಿಕೊಂಡು, ವಿದಾಯ ಹೇಳಿದೆವು. ಆದರೆ ಪನ್ನೀರ್‌ಸೆಲ್ವಂ ಅವರು ಮತ ಗಳಿಸುವ ಉದ್ದೇಶದಿಂದ ಜಯಾ ಅವರ ಶವವನ್ನು ಪೆಟ್ಟಿಗೆಯಲ್ಲಿಟ್ಟು ಮೆರವಣಿಗೆ ಮಾಡಿದರು ಎಂದು ಕಿಡಿಕಾರಿದ್ದಾರೆ.

Follow Us:
Download App:
  • android
  • ios