ಪ್ರೊಫೆಸರ್ ಕಿರುಕುಳ ತಾಳಲಾರದೆ ನರ್ಸ್ ಒಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಮೆಡಿಕಲ್-ಸಂಶೋಧನಾ ಕಾಲೇಜ್ನ ನರ್ಸ್ ಮಮತಾ ಆತ್ಮಹತ್ಯೆಗೆ ಯತ್ನಿಸಿರುವ ನರ್ಸ್. ನನ್ನ ಸಾವಿಗೆ BMRCI ನಲ್ಲಿ ಕೆಲಸ ಮಾಡುತ್ತಿರುವ ಪ್ರೊಫೆಸರ್ ಹೇಮಾವತಿಯವರೇ ಅವರೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಯತ್ನಿಸಿದ್ದಾರೆ.
ಬೆಂಗಳೂರು(ನ.19): ಪ್ರೊಫೆಸರ್ ಕಿರುಕುಳ ತಾಳಲಾರದೆ ನರ್ಸ್ ಒಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಮೆಡಿಕಲ್-ಸಂಶೋಧನಾ ಕಾಲೇಜ್ನ ನರ್ಸ್ ಮಮತಾ ಆತ್ಮಹತ್ಯೆಗೆ ಯತ್ನಿಸಿರುವ ನರ್ಸ್. ನನ್ನ ಸಾವಿಗೆ BMRCI ನಲ್ಲಿ ಕೆಲಸ ಮಾಡುತ್ತಿರುವ ಪ್ರೊಫೆಸರ್ ಹೇಮಾವತಿಯವರೇ ಅವರೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಯತ್ನಿಸಿದ್ದಾರೆ.
ಕೆಲ ದಿನಗಳ ಹಿಂದೆ ಪ್ರೊಫೆಸರ್ ಹೇಮಾವತಿ ಮಮತಾರನ್ನು ವಿದ್ಯಾರ್ಥಿಗಳ ಮುಂದೆ ನಿಂಧಿಸಿದ್ದರಂತೆ. ಇಷ್ಟೇ ಅಲ್ಲದೆ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಸದ್ಯ ತೀವ್ರ ಅಸ್ವಸ್ಥಗೊಂಡಿರುವ ಮಮತಾರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಮತಾ ಪತಿಯೂ ಕೂಡ ಪೊಲೀಸರಿಗೆ ಪತ್ರ ಬರೆದಿದ್ದು, ಪ್ರೊಫೆಸರ್ ಹೇಮಾವತಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
