ಅಮ್ಮನಿಲ್ಲದ ನಾಡಿನಲ್ಲಿ ಗದ್ದುಗೆ ಗುದ್ದಾಟ ಭಾರೀ ಬರದಿಂದ ಸಾಗಿದೆ. ಸಿಎಂ ಪಟ್ಟಕ್ಕಾಗಿ ರೆಸಾರ್ಟ್ ರಾಜಕಾರಣ ರಂಗೇರಿದೆ. ಚಿನ್ನಮ್ಮ-ಪನ್ನೀರ್ ಮಧ್ಯೆ ಇದೀಗ ತಲೈವಾ ರಜನಿ ಎಂಟ್ರಿ ಕೊಡ್ತಾರಂತೆ. ಹಾಗಾದರೆ ಸಿಂಹಾಸನಕ್ಕಾಗಿ ನಡೆಯುತ್ತಿರುವ ಈ ಇಬ್ಬರ ಜಗಳದಿಂದ ರಜನಿಗೆ ಲಾಭವಾಗುತ್ತದಾ? ನಿಜವಾಗಿಯೂ ರಜನಿ ರಾಜಕೀಯಕ್ಕೆ ಬರುತ್ತಾರಾ? ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಚೆನ್ನೈ(ಫೆ.11): ಅಮ್ಮನಿಲ್ಲದ ನಾಡಿನಲ್ಲಿ ಗದ್ದುಗೆ ಗುದ್ದಾಟ ಭಾರೀ ಬರದಿಂದ ಸಾಗಿದೆ. ಸಿಎಂ ಪಟ್ಟಕ್ಕಾಗಿ ರೆಸಾರ್ಟ್ ರಾಜಕಾರಣ ರಂಗೇರಿದೆ. ಚಿನ್ನಮ್ಮ-ಪನ್ನೀರ್ ಮಧ್ಯೆ ಇದೀಗ ತಲೈವಾ ರಜನಿ ಎಂಟ್ರಿ ಕೊಡ್ತಾರಂತೆ. ಹಾಗಾದರೆ ಸಿಂಹಾಸನಕ್ಕಾಗಿ ನಡೆಯುತ್ತಿರುವ ಈ ಇಬ್ಬರ ಜಗಳದಿಂದ ರಜನಿಗೆ ಲಾಭವಾಗುತ್ತದಾ? ನಿಜವಾಗಿಯೂ ರಜನಿ ರಾಜಕೀಯಕ್ಕೆ ಬರುತ್ತಾರಾ? ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ತಮಿಳುನಾಡಿನಲ್ಲಿ ಭಾರೀ ರಾಜಕೀಯ ಡ್ರಾಮಾ ನಡೆಯುತ್ತಿದೆ. ಯಾವಾಗಾ ಏನಾಗುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ. ಇದರ ಮಧ್ಯೆ ರಜನಿಕಾಂತ್ ರಾಜಕೀಯ ಎಂಟ್ರಿ ಸುದ್ದಿಗೆ ರೆಕ್ಕೆಪುಕ್ಕ ಸೇರಿ ಹಾರಾಡುವ ಹಂತಕ್ಕೂ ಬಂದಿದೆ ಅಂತಾ ಹೇಳಲಾಗುತ್ತಿದೆ. ಹೌದು ರಜನಿಕಾಂತ್ ರಾಜಕೀಯ ಸೇರುವುದು ಖಚಿತ ಅಂತ ಹೇಳಲಾಗುತ್ತಿದೆ. ಆದರೆ ತಾವೇ ಹೊಸ ಪಕ್ಷವನ್ನ ಸ್ಥಾಪಿಸುತ್ತಾರೋ ಇಲ್ಲ ಬಿಜೆಪಿ ಸೇಡುತ್ತಾರಾ ಎನ್ನುವುದೇ ಸಸ್ಪೆನ್ಸ್.
ರಜಿನಿ ಜೊತೆ ಮಾತುಕತೆ ನಡೆಸಿದ ಬಿಜೆಪಿ: ರಾಜಕೀಯ ಸಹವಾಸ ಬೇಡ ಎಂದಿದ್ದಾರೆ ಅಮಿತಾಭ್!
ರಾಜಕೀಯಕ್ಕೆ ಬಂದರೆ ಒಳ್ಳೆಯದಾಗುತ್ತದೆ ಬಂದು ಬಿಡಿ ಅಂತಾ ಆರ್'ಎಸ್'ಎಸ್ ಚಿಂತಕ ಗುರುಮೂರ್ತಿ ಈಗಾಗಲೇ ರಜಿನಿಕಾಂತ್ ಜೊತೆ ಮಾತನಾಡಿದ್ದಾರೆ. ಆದರೆ ಅಮಿತಾಬ್ ಬಚ್ಚನ್ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಹೋಗಬೇಡಿ ಅಂತಾ ಮೊನ್ನೆ ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಸಲಹೆ ಕೊಟ್ಟಿದ್ದಾರೆ. ಆದರೆ ತಲೈವಾ ರಜಿನಿ ನಡೆ ಮಾತ್ರ ಇನ್ನೂ ನಿಗೂಢವಾಗಿದೆ.
ಸದ್ಯಕ್ಕೆ ತಮಿಳುನಾಡಲ್ಲಿ ರಾಜಕೀಯ ಬೃಹನ್ನಾಟಕವೇ ನಡೆಯುತ್ತಿದೆ. ಜಯಲಲಿತಾ ಸಾವಿನ ನಂತರ ಇಡೀ ತಮಿಳುನಾಡನ್ನು ಆಳುವಂಥ ಸಾಮರ್ಥ್ಯ ಇರುವವರು ಎನ್ನುವುದು ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ರಜಿನಿ ರಾಜಕೀಯ ಎಂಟ್ರಿ ಭಾರೀ ಕುತೂಹಲ ಕೆರಳಿಸಿದೆ. ರಾಜಕೀಯ ಅತಂತ್ರ ಸ್ಥಿತಿಯಲ್ಲೇ ರಜಿನಿ ಎಂಟ್ರಿಯಾದರೆ ಒಳ್ಳೆಯದು ಎನ್ನುವ ಮಾತು ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ರಜಿನಿಗೆ ತಮಿಳುನಾಡಿನ ಕಣ್ಮಣಿಯಾಗುವ ಅವಕಾಶ ಸಿಕ್ಕರೂ ಸಿಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಪಟ್ಟಕ್ಕಾಗಿ ಪಟ್ಟು ಬಿದ್ದಿಡುವ ಚಿನ್ನಮ್ಮ ಮತ್ತು ಪನ್ನೀರ್ ಮಧ್ಯೆ, ತಲೈವಾ ರಾಜಕಾರಣಕ್ಕೆ ಎಂಟ್ರಿಯಾಗಿ ರಾಜಕೀಯ ಲಾಭ ಪಡೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ.
