ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹಾಗಾಗಿ, ಅವರ ಹೆಸರನ್ನು ಗಿನ್ನೆಸ್‌ ದಾಖಲೆ ಪುಸ್ತಕದಲ್ಲಿ ಉಲ್ಲೇಖಿಸಬೇಕು ಎಂದು ಕೇಂದ್ರದ ಸರ್ಕಾರದ ಆಡಳಿತದ ಕುರಿತು ಗೋವಾ ಕಾಂಗ್ರೆಸ್‌ ಕುಹುಕವಾಡಿದೆ. 

ಪಣಜಿ: ವಿದೇಶಗಳ ಪ್ರವಾಸ ಕೈಗೊಳ್ಳುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹಾಗಾಗಿ, ಅವರ ಹೆಸರನ್ನು ಗಿನ್ನೆಸ್‌ ದಾಖಲೆ ಪುಸ್ತಕದಲ್ಲಿ ಉಲ್ಲೇಖಿಸಬೇಕು ಎಂದು ಕೇಂದ್ರದ ಸರ್ಕಾರದ ಆಡಳಿತದ ಕುರಿತು ಗೋವಾ ಕಾಂಗ್ರೆಸ್‌ ಕುಹುಕವಾಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದ ಆಡಳಿತ ಚುಕ್ಕಾಣಿ ಹಿಡಿದ ನಾಲ್ಕು ವರ್ಷಗಳಲ್ಲಿ ಮೋದಿ ಅವರು 52 ರಾಷ್ಟ್ರಗಳ ಪ್ರವಾಸ ಕೈಗೊಳ್ಳುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಅಲ್ಲದೆ, ಭಾರತದ ರುಪಾಯಿ ಮೌಲ್ಯವನ್ನು ಅಮೆರಿಕದ ಡಾಲರ್‌ ಮೌಲ್ಯದ ಎದುರು 69.03 ಗಡಿ ದಾಟಿಸಿದ್ದಾರೆ. 

ಹಾಗಾಗಿ, ಪ್ರಧಾನಿ ಮೋದಿ ಅವರನ್ನು ವಿಶ್ವ ದಾಖಲೆಯಲ್ಲಿ ಸೇರಿಸಬೇಕು ಎಂದು ಬ್ರಿಟನ್‌ನಲ್ಲಿರುವ ಗಿನ್ನೆಸ್‌ ವಿಶ್ವ ದಾಖಲೆಗಳ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಗೋವಾ ಕಾಂಗ್ರೆಸ್‌ ಹೇಳಿದೆ.