ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಆಪ್ತ ಸಂಜೀವ್ ಮಹಾಜನ್‌ಗೆ ಸೇರಿದ ಮನೆಗಳು ಮತ್ತು ಇತರ ಪ್ರದೇಶಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ನವದೆಹಲಿ(ಡಿ.1): ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಆಪ್ತ ಸಂಜೀವ್ ಮಹಾಜನ್‌ಗೆ ಸೇರಿದ ಮನೆಗಳು ಮತ್ತು ಇತರ ಪ್ರದೇಶಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಇತರ ಇಬ್ಬರು ಉದ್ಯಮಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೂ ದಾಳಿ ನಡೆದಿದೆ. ಸಂದೇಸಾರಾ ಗ್ರೂಪ್ ಆಫ್ ಕಂಪೆನೀಸ್‌ನಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆದಿರುವ ಶಂಕೆಯಲ್ಲಿ ದಾಳಿ ನಡೆದಿದೆ.

ದೆಹಲಿಯ ಮಯೂರ್ ವಿಹಾರ್ ಹಂತ 1 ಮತ್ತು ಬಾಬಾರ್ ರಸ್ತೆಯಲ್ಲಿರುವ ಮಹಾಜನ್‌ಗೆ ಸೇರಿದ ಸ್ಥಳಗಳಲ್ಲಿ ತನಿಖೆ ನಡೆಸಲಾಗಿದೆ. ಮೂವರು ಉದ್ಯಮಿಗಳ ಸ್ಥಳಗಳಲ್ಲೂ ಪರಿಶೀಲನೆ ನಡೆದಿದೆ.