ದೇಶದ ಅತೀ ಹಗ್ಗದ ಕಾರು ಎಂಬ ಕೀರ್ತಿಗೆ ಭಾಜನವಾಗಿದ್ದ ಟಾಟಾ ನ್ಯಾನೋ ಕಾರು ಉತ್ಪಾದನೆ ಸ್ಥಗಿತವಾಗುವ ಸಾಧ್ಯತೆ ದಟ್ಟವಾಗಿದೆ. 

ನವದೆಹಲಿ: ದೇಶದ ಅತೀ ಹಗ್ಗದ ಕಾರು ಎಂಬ ಕೀರ್ತಿಗೆ ಭಾಜನವಾಗಿದ್ದ ಟಾಟಾ ನ್ಯಾನೋ ಕಾರು ಉತ್ಪಾದನೆ ಸ್ಥಗಿತವಾಗುವ ಸಾಧ್ಯತೆ ದಟ್ಟವಾಗಿದೆ. 

ಕಳೆದ ತಿಂಗಳ(ಜೂನ್‌)ಲ್ಲಿ ಕೇವಲ ಒಂದು ನ್ಯಾನೋ ಕಾರನ್ನು ಮಾತ್ರ ಉತ್ಪಾದಿಸಲಾಗಿದೆ. ಹಾಗಾಗಿ, ನ್ಯಾನೋ ಕಾರು ಉತ್ಪಾದನೆ ಸ್ಥಗಿತವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 

ಆದರೆ, ನ್ಯಾನೋ ಕಾರಿನ ಉತ್ಪಾದನೆ ಸ್ಥಗಿತಗೊಳಿಸುವ ಯಾವುದೇ ನಿರ್ಧಾರವನ್ನು ಇದುವರೆಗೂ ಕೈಗೊಳ್ಳಲಾಗಿಲ್ಲ ಎಂದು ಟಾಟಾ ಕಂಪನಿ ಸ್ಪಷ್ಟಪಡಿಸಿದೆ. 

ದೇಶದಲ್ಲಿರುವ ನಾಗರಿಕರಿಗೆ ಬೈಕ್‌ಗೆ ಪರ್ಯಾಯವಾಗಿ ಕಡಿಮೆ ಮತ್ತು ಗುಣಮಟ್ಟದ ಕಾರನ್ನು ಒದಗಿಸಬೇಕು ಎಂಬ ಮಹತ್ವಾಕಾಂಕ್ಷೆ ಯೋಜನೆಯಡಿ ಟಾಟಾ ಸಮೂಹ ಸಂಸ್ಥೆ 2008ರಲ್ಲಿ ನ್ಯಾನೋ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. 

ಆದರೆ, ಕಳೆದ ತಿಂಗಳು ಕೇವಲ 3 ನ್ಯಾನೋ ಕಾರುಗಳು ಮಾರಾಟವಾಗಿವೆ. ಅಲ್ಲದೆ, ಕಳೆದ ವರ್ಷ 25 ಕಾರುಗಳು ವಿದೇಶಕ್ಕೆ ರಫ್ತಾಗಿದ್ದವು. ಆದರೆ, ಹಾಲಿ ವರ್ಷದಲ್ಲಿ ನ್ಯಾನೋ ಕಾರುಗಳ ರಫ್ತು ಸಹ ಸ್ಥಗಿತಗೊಂಡಿದೆ.