ದುಬೈ ಮೂಲದ ಎಮಿರೇಟ್ಸ್ ಏರ್'ಲೈನ್'ನಿಂದ ಉಚಿತ ಏರ್ ಟಿಕೆಟ್..!

First Published 20, Jan 2018, 12:04 PM IST
Emirates is not giving away free tickets
Highlights

ಆದರೆ ನಿಜಕ್ಕೂ ಎಮಿರೇಟ್ಸ್ ಈ ಕೊಡುಗೆ ನೀಡುತ್ತಿರುವುದು ನಿಜವೇ ಎಂದು ತಿಳಿಯಹೊರಟಾಗ, ಇಂತಹ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲವೆಂಬುದು ತಿಳಿಯಿತು. ಅಲ್ಲದೆ ಈ ಕಂಪನಿಯ ಅಧಿಕೃತ ವೆಬ್‌'ಸೈಟ್‌'ನಲ್ಲಿರುವ ಪ್ರಕಾರ ಇದು ಪ್ರಾರಂಭವಾಗಿದ್ದು, 1985ರಲ್ಲಿ. ಅಂದರೆ ಇದು ಪ್ರಾರಂಭವಾಗಿ 33ವರ್ಷಗಳು ಕಳೆದಿವೆ. ಹಾಗಾಗಿ 80ನೇ ವರ್ಷಾಚರಣೆಗೆ ಈ ಕೊಡುಗೆ ನೀಡುತ್ತಿದೆ ಎಂಬುದು ಸುಳ್ಳು ಎಂದಂತಾಯಿತು. ಅಲ್ಲದೆ ಏರ್‌'ಲೈನ್ ಈ ವದಂತಿಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಈ ರೀತಿ ಯಾವುದೇ ಕೊಡುಗೆಯನ್ನು ಘೋಷಿಸಿಲ್ಲ ಎಂದು ಹೇಳಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದುಬೈ ಮೂಲದ ಎಮಿರೇಟ್ಸ್ ಏರ್‌ಲೈನ್ಸ್ ಸರ್ವೇಯೊಂದಕ್ಕೆ ಪ್ರತಿಕ್ರಿಯಿಸಿದವರಿಗೆ ಉಚಿತವಾಗಿ ವಿಮಾನದ ಟಿಕೆಟ್‌'ಗಳನ್ನು ನೀಡಲಿದೆ. ವಿಮಾನದಲ್ಲಿ ಹೋಗಬೇಕೆಂಬ ಕನಸಿರುವವರು ಬೇರೇನೂ ಮಾಡಬೇಕಾಗಿಲ್ಲ, ಈ ಕೆಳಗಿನ ಲಿಂಕ್ ಒತ್ತಿ ಎಂಬಂತಹ ಸಂದೇಶಗಳು ಹರಿದಾಡುತ್ತಿವೆ. ದುಬೈ ಮೂಲದ ಎಮಿರೇಟ್ಸ್ ಕಂಪನಿ ಯು ತನ್ನ 33 ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದರಿಂದ ಈ ಕೊಡುಗೆ ನೀಡುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ ಇನ್ನೂ ಕೆಲವರು ಎಮಿರೇಟ್ಸ್ ತನ್ನ 80ನೇ ವರ್ಷದ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದರಿಂದ ಈ ಕೊಡುಗೆ ನೀಡುತ್ತಿದೆ ಎಂದಿದ್ದಾರೆ.

ಆದರೆ ನಿಜಕ್ಕೂ ಎಮಿರೇಟ್ಸ್ ಈ ಕೊಡುಗೆ ನೀಡುತ್ತಿರುವುದು ನಿಜವೇ ಎಂದು ತಿಳಿಯಹೊರಟಾಗ, ಇಂತಹ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲವೆಂಬುದು ತಿಳಿಯಿತು. ಅಲ್ಲದೆ ಈ ಕಂಪನಿಯ ಅಧಿಕೃತ ವೆಬ್‌'ಸೈಟ್‌'ನಲ್ಲಿರುವ ಪ್ರಕಾರ ಇದು ಪ್ರಾರಂಭವಾಗಿದ್ದು, 1985ರಲ್ಲಿ. ಅಂದರೆ ಇದು ಪ್ರಾರಂಭವಾಗಿ 33ವರ್ಷಗಳು ಕಳೆದಿವೆ. ಹಾಗಾಗಿ 80ನೇ ವರ್ಷಾಚರಣೆಗೆ ಈ ಕೊಡುಗೆ ನೀಡುತ್ತಿದೆ ಎಂಬುದು ಸುಳ್ಳು ಎಂದಂತಾಯಿತು. ಅಲ್ಲದೆ ಏರ್‌'ಲೈನ್ ಈ ವದಂತಿಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಈ ರೀತಿ ಯಾವುದೇ ಕೊಡುಗೆಯನ್ನು ಘೋಷಿಸಿಲ್ಲ ಎಂದು ಹೇಳಿದೆ.

ಅಲ್ಲದೆ ಯಾವುದೇ ಆನ್‌ಲೈನ್ ಸಮೀಕ್ಷೆ ಕೂಡಾ ನಡೆಸಲಾಗುತ್ತಿಲ್ಲ. ಈ ರೀತಿ ವದಂತಿ ಹಬ್ಬಿಸಿದವರ ಬಗ್ಗೆ ಎಮಿರೇಟ್ಸ್ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದೆ. ಆದರೆ ಎಮಿರೇಟ್ಸ್ ಏರ್‌ಲೈನ್ಸ್ ಬಗ್ಗೆ ಮಾತ್ರ ಈ ರೀತಿಯ ವದಂತಿ ಹಬ್ಬಿರುವುದಲ್ಲ. ಈ ಹಿಂದೆ ಮೇ 2017ರಲ್ಲಿ ಏರ್‌ ಏಷ್ಯಾ ಬಗ್ಗೆ ಕೂಡ ಇದೇ ರೀತಿಯ ವದಂತಿ ಹಬ್ಬಿಸಲಾಗಿತ್ತು.

loader